Select Your Language

Notifications

webdunia
webdunia
webdunia
webdunia

ಕಂಗನಾ ತಮ್ಮ ಸಂಭಾವನೆಯನ್ನು ಏನ್ ಮಾಡುತ್ತಾರೆ ಗೊತ್ತಾ?

ಕಂಗನಾ ತಮ್ಮ ಸಂಭಾವನೆಯನ್ನು ಏನ್ ಮಾಡುತ್ತಾರೆ ಗೊತ್ತಾ?
ಮುಂಬೈ , ಸೋಮವಾರ, 25 ಜುಲೈ 2016 (09:31 IST)
ಬಾಲಿವುಡ್ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು ಕಂಗನಾ ರನೌತ್. ರಾಷ್ಟ್ರಪ್ರಶಸ್ತಿ ವಿಜೇತ ನಟಿಯಾಗಿರುವ ಕಂಗನಾ ಅವರು ತಮ್ಮ ಒಂದು ಸಿನಿಮಾಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ.ಇನ್ನು ಜಾಹೀರಾತುಗಳಿಂದಲೂ ಭರ್ಜರಿ ಆದಾಯ ಬರುತ್ತೆ. ಇದನ್ನೆಲ್ಲಾ ಏನ್ ಮಾಡ್ತೇನೆ ಅನ್ನೋದನ್ನು ಇದೀಗ ಕಂಗನಾ ಹೇಳಿದ್ದಾರೆ.


ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ ರನೌತ್ ನಾನು ನನ್ನ 17ನೇ ವರ್ಷಕ್ಕೆ ಸಿನಿಮಾಗಳಲ್ಲಿ ಅಭಿನಯಿಸೋದಕ್ಕೆ ಆರಂಭಿಸಿದೆ.ನಾನು ನನ್ನ ಸಿನಿಮಾ ಜೀವನದ ಆರಂಭದಲ್ಲಿ ಸಾಕಷ್ಟು ರೀತಿಯ ಜನರನ್ನು ನೋಡಿದ್ದೇನೆ, ಆಗ ನನ್ನ ಜೊತೆಇದ್ದವರಲ್ಲಿ ಅನೇಕರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು.

ಆದ್ರೆ ನಾನು ಮಾತ್ರ ಉತ್ತಮವಾದ ಜೀವನವನ್ನು ಅನುಸರಿಸಿದೆ.ನಾನು ಇವತ್ತು ಇಷ್ಟೆಲ್ಲಾ ಸಂಪಾದನೆ ಮಾಡಿದ್ರು ನನಗಾಗಿ ಒಂದು ಸ್ವಂತ ಮನೆಯನ್ನು ಕೂಡ ಖರೀದಿ ಮಾಡಿಲ್ಲ.ಆದ್ರೆ ನನ್ನ ಹೆತ್ತವರಿಗಾಗಿ ನಾನು ಎಲ್ಲವನ್ನು ಮಾಡಿದ್ದೇನೆ ಅಂತಾ ಅವರು ಹೇಳಿದ್ದಾರೆ.

ಇನ್ನು ತನ್ನ ವ್ಯವಹಾರಗಳ ಬಗ್ಗೆ ಮಾತನಾಡಿರುವ ಕಂಗನಾ ನಾನು ಹಣವನ್ನು ಮ್ಯಾನೇಜ್ ಮಾಡೋದರಲ್ಲಿ ತುಂಬಾ ಹಿಂದೆ. ನನ್ನ ಸಹೋದರಿ ರಂಗೋಲಿ ನನ್ನ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾಳೆ.ಅವಳೇ ಅದರ ಇನ್ಚಾರ್ಜ್. ಇನ್ನು ನಾನು ರಿಯಲ್ ಎಸ್ಟೇಟ್, ಚಿನ್ನ ಹಾಗೇ ಸ್ಟೋಕ್ಸ್ ನಲ್ಲಿ ಹಣವನ್ನು ವಿನಿಯೋಗಿಸುತ್ತೇನೆ.ಆದ್ರೆ ಇದಕ್ಕಿಂತ ಹೆಚ್ಚು ನನಗೇನು ಗೊತ್ತಿಲ್ಲ ಅಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ನಿಜವಾಗಿತ್ತಿದೆಯಾ ದೀಪಿಕಾ ಪಡುಕೋಣೆ ಅವರ ಕನಸು?