Select Your Language

Notifications

webdunia
webdunia
webdunia
webdunia

ಮೇಕಪ್ ಮ್ಯಾನ್ ನಿರ್ಮಾಣದ ಚಿತ್ರದಲ್ಲಿ ನಟಿಸಲು ಜೂಹಿ ಚಾವ್ಲ ಸಮ್ಮತಿ

ಮೇಕಪ್ ಮ್ಯಾನ್ ನಿರ್ಮಾಣದ ಚಿತ್ರದಲ್ಲಿ ನಟಿಸಲು  ಜೂಹಿ ಚಾವ್ಲ ಸಮ್ಮತಿ
, ಸೋಮವಾರ, 13 ಏಪ್ರಿಲ್ 2015 (10:54 IST)
ತಮ್ಮ  ಬಳಿ ನಿಸ್ವಾರ್ಥವಾಗಿ ಕೆಲಸ ಮಾಡುವ ಕೆಲಸಗಾರರ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುತ್ತಾರೆ ಮಾಲೀಕರು. ಅವರು ತಮ್ಮ ಕೈಲಾದ ವಿಶೇಷವಾದ ಸೇವೆ, ಬಹುಮಾನ ಏನೇ ಆಗಿರಬಹುದು ನೀಡುತ್ತಾರೆ. ನಟಿ ಅನುಷ್ಕಾ ಶೆಟ್ಟಿ ತಮ್ಮ  ಮೇಕಪ್ ಮ್ಯಾನ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸಿದ್ದರೇ, ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಅವರು ಇನ್ನು ಮುಂದೆ ಹೋಗಿ ತಮ್ಮ ಸಿಬ್ಬಂದಿಗಾಗಿ ಮನೆ ಕಟ್ಟಿ ಕೊಟ್ಟಿದ್ದಾರೆ.

ಈಗ ಆ ಪಟ್ಟಿಗೆ ಬಾಲಿವುಡ್ ನಟಿ ಜೂಹಿ ಚಾವ್ಲ ಅವರು ಸೇರ್ಪಡೆ ಆಗಿದ್ದಾರೆ. ಅವರು ಈಗ ತಮ್ಮ ಬಳಿ ಕಳೆದ ಹದಿನೆಂಟು ವರ್ಷಗಳಿಂದ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿರುವ  ಸುಭಾಷ್ ಸಿಂಗ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸಲು ಸಮ್ಮತಿಸಿದ್ದಾರೆ.  ಈ ಚಿತ್ರದಲ್ಲಿ ಜೂಹಿಯದ್ದು ಬಹುಮುಖ್ಯ ಪಾತ್ರವಾಗಿದೆಯಂತೆ.     
 
ಅದರ ಜೊತೆ ಅವರು ಸುಭಾಷ್ ಸಿಂಗ್ ಅವರಿಗೆ ಒಂದು ಬಂಪರ್ ಆಫರ್ ನೀಡಿದ್ದಾರಂತೆ. ಅಕಸ್ಮಾತ್ ಅವರಿಗೆ ಚಿತ್ರದ ಕಥೆ ಇಷ್ಟವಾದರೆ ಅವರು ಸಂಭಾವನೆಯನ್ನು ಸಹಿತ ಪಡೆಯುವುದಿಲ್ಲವಂತೆ. ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಜಾಕಿ ಶ್ರಾಫ್, ಶಬನಾ ಅಜ್ಮಿ ಸಹಿತ ಸಂಭಾವನೆ ಪಡೆಯದೇ ನಟಿಸಲು ಒಪ್ಪಿದ್ದಾರಂತೆ. ಹಾಗಂತ ಸುಭಾಷ್ ಸಿಂಗ್ ಮಾಧ್ಯಮಗಳ ಮುಂದೆ ಹೇಳಿ ಖುಷಿ ಪಡುತ್ತಿದ್ದಾರೆ. ಇಂತಹ ಬುದ್ಧಿ ಎಲ್ಲಾ ಸ್ಟಾರ್ ನಟ-ನಟಿಯರಿಗೆ ಬಂದರೆ ನಿರ್ಮಾಪಕರ ಚಿತ್ರ ಸೋತರು ಅವರು ಸಾಲಗಾರರಾಗುವುದಿಲ್ಲ.

Share this Story:

Follow Webdunia kannada