Select Your Language

Notifications

webdunia
webdunia
webdunia
webdunia

ನನ್ನ ಪಾತ್ರದ ಬಗ್ಗೆ ನನಗೇನು ಬೇಸರವಿಲ್ಲ- ಇರ್ಫಾನ್ ಖಾನ್

ನನ್ನ ಪಾತ್ರದ ಬಗ್ಗೆ ನನಗೇನು ಬೇಸರವಿಲ್ಲ- ಇರ್ಫಾನ್ ಖಾನ್
, ಬುಧವಾರ, 26 ಆಗಸ್ಟ್ 2015 (10:49 IST)
ನಟ ಇರ್ಫಾನ್ ಖಾನ್ ಜಝ್ಬಾ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಜೊತೆ ಕಾಣಿಸಿಕೊಂಡಿದ್ದಾರೆ. ಆದ್ರೆ ಸಿನಿಮಾದ ಟ್ರೇಲರ್ ಹಾಗೂ ಪೋಸ್ಟರ್ ನಲ್ಲಿ ಇರ್ಫಾನ್ ಖಾನ್ ಪಾತ್ರಕ್ಕೆ ಕೊಂಚ ಪ್ರಾಶಸ್ತ್ಯ ಕಡಿಮೆಯಾದಂತೆ ಕಾಣಿಸುತ್ತದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇರ್ಫಾನ್ ಖಾನ್ ಮಾತ್ರ ಪಾತ್ರಕ್ಕೆ ತಕ್ಕ ಪ್ರಾಶಸ್ತ್ಯ ಇಲ್ಲ ಅನ್ನೋದಕ್ಕೆ ನನಗೇನು ಬೇಸರವಿಲ್ಲ ಎಂದಿದ್ದಾರೆ.
 
ಜಝ್ಬಾ ಸಿನಿಮಾದಲ್ಲಿ ತಾನು ಅಭಿನಯಿಸಲು ಐಶ್ವರ್ಯಾ ರೈ ಅವರೇ ಕಾರಣ ಎಂದಿರುವ ಇರ್ಫಾನ್ ಖಾನ್ ಅವರಿಂದಾಗಿಯೇ ನಾನು ಈ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ. ಐಶ್ ಜೊತೆ ನಟಿಸಬೇಕು ಎಂದು ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ.  ಹಾಗಾಗಿಯೇ ಸಿನಿಮಾದಲ್ಲಿ ನಟಿಸಿದ್ದೇನೆ ಅಂತಾ ಇರ್ಫಾನ್ ಖಾನ್ ಹೇಳಿದ್ದಾರೆ.
 
ಇದೀಗ ಸಿನಿಮಾದ  ಟ್ರೇಲರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 5 ವರ್ಷಗಳ ನಂತರ ಈ ಸಿನಿಮಾದ ಮೂಲಕ ಐಶ್ ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾದಲ್ಲಿ ಐಶ್ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಸಂಜಯ್ ಗುಪ್ತಾ ನಿರ್ದೇಶಿಸಿದ್ದಾರೆ. ಶಬನಾ ಆಜ್ಮಿ ಹಾಗೂ ಅನುಪಮ್ ಖೇರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada