Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯ ಆಂಡ್ರೂ ಜೊತೆ ಭಾರತ ಇಲಿಯಾನ ಮದುವೆ?

ಆಸ್ಟ್ರೇಲಿಯ ಆಂಡ್ರೂ ಜೊತೆ ಭಾರತ ಇಲಿಯಾನ  ಮದುವೆ?
, ಶುಕ್ರವಾರ, 18 ಜುಲೈ 2014 (12:32 IST)
ಇಲಿಯಾನ ಬರ್ಫಿ ಚಿತ್ರದ ಮುಖಾಂತರ ಬಾಲಿವುಡ್ ಗೆ ಎಂಟ್ರಿ ಆದದ್ದು ಎಲ್ಲರಿಗು ಗೊತ್ತೇ ಇದೆ. ಅದಕ್ಕೂ ಮುನ್ನ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತನ್ನ ಛಾಪು ತೋರಿದ್ದಳು ಈ ಚೆಲುವೆ. 

ಯಾವಾಗ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಸಿಕ್ತೋ ಆಗ ತಕ್ಷಣ ಅಲ್ಲಿಗೆ ಹೋಗಿ ನಟಿಸಿದ್ದಲ್ಲದೆ, ಮತ್ತೆ ದಕ್ಷಿಣ ಭಾರತದ ಕಡೆ ಹಿಂತಿರುಗುವ ಯೋಚನೆ ಮಾಡಲೇ ಇಲ್ಲ.ಇಲ್ಲಿ ತನಕ  ಆಕೆ ಹಿರಿಯ  ನಿರ್ದೇಶಕ  ಡೇವಿಡ್ ಧವನ್ ಪುತ್ರ ವರುಣ್ ಧವನ್ ಜೊತೆ ಪ್ರೇಮಾಯಣದಲ್ಲಿ ತೊಡಗಿದ್ದಾಳೆ ಎಂದು ಬರೆದಿದ್ದೆವು, ಈಗ ಹೊಸದೊಂದು ಸುದ್ದಿ ಹೊರ ಬಂದಿದೆ. ಆಕೆಯು ಭಾರತದ ವರುಣ್ ಜೊತೆಯಲ್ಲಿ ಅಲ್ಲ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರೂ ಜೊತೆಯಲ್ಲಿ ಲವ್ ಮಾಡ್ತಾ ಇದ್ದಾಳೆ.

ಅದೆಷ್ಟರಮಟ್ಟಿಗೆ ತನ್ನ ಪ್ರೀತಿಯಲ್ಲಿ ಮುಳುಗಿಹೋಗಿದ್ದಾಳೆ ಅಂದ್ರೆ ಅದರಿಂದ ಏಳಲು ಆಕೆ ಮದುವೆ ಆಗುವುದೊಂದೇ ಪರಿಹಾರ ಎನ್ನುವ ಪರಿಸ್ಥಿತಿ ಏರ್ಪಟ್ಟಿದೆ. ಮದುವೆ ನಂತರ ಆಕೆ ನಟನೆಗೆ ಫುಲ್ಸ್ಟಾಪ್ ಇಡುವುದಿಲ್ಲ ಎಂದು ಹೇಳಿರುವ ಮಾತು ಸಹ ಎಲ್ಲರ ಗಮನ ಸೆಳೆದಿದೆ.

webdunia
ಅದಕ್ಕೆ ಆಕೆ ಹೇಳೋದಿಷ್ಟೇ ನನ್ನ ಅಮ್ಮನ ಆಶಯದಂತೆ ನಾನು ಚಿತ್ರರಂಗಕ್ಕೆ  ಬಂದೆ, ಆ ಬಳಿಕ ನನಗೆ ಅದು ನನ್ನ ಬದುಕಿನ ಬಹು ಮುಖ್ಯ ಭಾಗವಾಯಿತು. ನಾನು ಅತ್ಯುತ್ತಮ ಹೀರೋಯಿನ್ ಆಗ ಬೇಕು ಎನ್ನುವುದೇ ನಮ್ಮ ಅಮ್ಮನ ಆಸೆ, ಮದುವೆ ಆದ ಬಳಿಕವು ನಾನು ನಟಿಸುವುದನ್ನು ನಿಲ್ಲಿಸಲ್ಲ ಎನ್ನುವ ಮಾತು ಹೇಳಿದ್ದಾಳೆ ಆಕೆ. 
 
ಆದರೆ ಮದುವೆ ಆದ ಬಳಿಕವು  ನಟಿಸುವ ಆಸಕ್ತಿ  ಹೊಂದಿರುವ ಈ ಚೆಲುವೆ ಯಾವರೀತಿ ಪಾತ್ರಗಳು ಸಿಗ ಬಹುದು ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಆಗಿದೆ. ಈಗ ಆಕೆ ಹ್ಯಾಪಿ ಎಂಡಿಂಗ್ ಅನ್ನುವ ಬಾಲಿವುಡ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾಳೆ. ಮುಂಬರುವ ದಿನಗಳಲಿ ಕತ್ರಿನ, ದೀಪಿಕಾ, ಪ್ರಿಯಾಂಕ ರಂತೆ ಸೂಪರ್ ಸ್ಟಾರಿಣಿ ಆಗ್ತೀನಿ ಅನ್ನುವ ನಂಬಿಕೆ ಹೊಂದಿದ್ದಾಳೆ ಈ ಚೆಲುವೆ!

Share this Story:

Follow Webdunia kannada