Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ ಜತೆಗೆ ನಟಿಸುವುದರ ಬಗ್ಗೆ ಎಕ್ಸೈಟ್ ಆಗಿದ್ದೆ : ತಪಸ್ಯಾ ಪಾನು

ಅಮಿತಾಬ್ ಬಚ್ಚನ್ ಜತೆಗೆ ನಟಿಸುವುದರ ಬಗ್ಗೆ ಎಕ್ಸೈಟ್ ಆಗಿದ್ದೆ : ತಪಸ್ಯಾ ಪಾನು
ಮುಂಬೈ , ಶನಿವಾರ, 10 ಸೆಪ್ಟಂಬರ್ 2016 (16:27 IST)
ಬಾಲಿವುಡ್ ನಟ ಅಮಿತಾಬ್ ಬಚ್ಚನ್  ಮುಂಬರುವ ಚಿತ್ರ 'ಪಿಂಕ್'ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅಮಿತಾಬ್ ಬಚ್ಚನ್ ಜತೆಗೆ ಈ ಕೆಲಸ ಮಾಡಿರುವ ನಟಿ ತಪಸ್ಯಾ ಪಾನು ಬಿಗ್ ಬಿ ಬಗ್ಗೆ ಕೆಲ ವಿಚಾರಗಳನ್ನು ಶೇರ್ ಮಾಡಿದ್ದಾರೆ.


'ಪಿಂಕ್' ಚಿತ್ರದಲ್ಲಿ ತಪಸ್ಯಾ ಪಾನು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ನಟ ಅಮಿತಾಬ್ ಬಚ್ಚನ್ ಜತೆಗೆ ಕೆಲಸ ಮಾಡುವುದರ ಕುರಿತು ತಪಸ್ಯಾಗೆ ನರ್ವಸ್ ಆಗಿರಲಿಲ್ವಂತೆ. ಆದ್ರೆ ತುಂಬಾ ಎಕ್ಟೈಟ್ ಆಗಿದ್ರಂತೆ. 
 
'ನಾನು ನರ್ವಸ್ ಆಗಿರಲಿಲ್ಲ'.' ಈ ಬಗ್ಗೆ ತುಂಬಾ ಎಕ್ಟೈಟ್ ಆಗಿದ್ದೆ', 'ಆದ್ದರಿಂದ ನಾನು ಹಾಗೇ ಕಾಣಿಸಿಕೊಳ್ಳುತ್ತಿದೆ''.ನಾನು 'ಅಮಿತಾಬ್ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದು ನನಗೆ ಖುಷಿ ತಂದಿದೆ' ಎಂದು ತಪಸ್ಯಾ ತಿಳಿಸಿದ್ದರು. ಈ ಚಿತ್ರದಲ್ಲಿ ಯಾವುದೇ ರೇಪ್ ಬಗ್ಗೆ ತೋರಿಸಲಾಗಿಲ್ಲ, ಈ ಚಿತ್ರ ಅತ್ಯಾಚಾರದ ಬಗ್ಗೆ ಬಿಂಬಿಸುವುದಿಲ್ಲ, ಇದು ಜೀವನದ ಕೆಲ ನೈಜ ಘಟನೆಗಳ ಬಗ್ಗೆ ಎತ್ತಿ ತೋರಿಸುತ್ತದೆ. 'ಪಿಂಕ್' ಚಿತ್ರ ಸೆಪ್ಟೆಂಬರ್ 16ರಂದು ರಿಲೀಸ್ ಆಗಿಲದೆ. 
 
ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಪಿಕು ಚಿತ್ರದ ನಿರ್ಮಾಪಕ ಸೋಯಜಿತ್ ನಿರ್ಮಾಣ ಮಾಡುತ್ತಿದ್ದಾರೆ. 
 
ಸೋಯಜಿತ್ ಬ್ಯಾನರ್‌ನಲ್ಲಿ ಮೂಡಿ ಬಂದ ಪಿಕು ಚಿತ್ರ ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇನ್ನೂ ಈ ಚಿತ್ರದಲ್ಲಿ ಬೇಬಿ ಆ್ಯಕ್ಟರ್ ತಪಸ್ಯಾ ಪಾನು ಜತೆಯಾಗಲಿದ್ದಾಳೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಬೆಂಗಾಲಿ ಚಿತ್ರ ನಿರ್ಮಾಪಕ ಅನಿರುದ್ಧ ರಾಯ್ ಚೌಧರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಖಿಲ್ ಅಕ್ಕಿನೇನಿ ಡಿಸೆಂಬರ್ 9ರಂದು ನಿಶ್ಚಿತಾರ್ಥ