Select Your Language

Notifications

webdunia
webdunia
webdunia
webdunia

ಸೋನಂ ,ದೀಪಿಕಾ ಅತ್ಯುತ್ತಮ ಉಡುಪನ್ನು ಧರಿಸುತ್ತಾರೆ -ಕಂಗನ

ಸೋನಂ ,ದೀಪಿಕಾ ಅತ್ಯುತ್ತಮ ಉಡುಪನ್ನು ಧರಿಸುತ್ತಾರೆ -ಕಂಗನ
, ಶನಿವಾರ, 19 ಜುಲೈ 2014 (11:58 IST)
ಸೋನಂ ಕಪೂರ್ ಮತ್ತು ಕಂಗನಾ ನಡುವೆ ಸ್ನೇಹ ಇಲ್ಲ ಅನ್ನೋ ಸುದ್ದಿ ಬಾಲಿವುಡ್ ನಲ್ಲಿ ಇದೆ. ಆದರು ಸಹ ಕಂಗನ ಸೋನಂ ವಿಷಯದಲ್ಲಿ ಒಳ್ಳೆಯ ಮಾತುಗಳನ್ನೇ ಆಡಿದ್ದಾಳೆ. ಆಕೆ ಬಾಲಿವುಡ್ ನಲ್ಲಿ ಅತ್ಯುತ್ತಮ ಫ್ಯಾಷನ್ ಬಟ್ಟೆ ಧರಿಸುವುವರಲ್ಲಿ ಸೋನಂ ಮೊದಲ ಸ್ಥಾನಕ್ಕೆ ಸೇರುತ್ತಾಳೆ ಎನ್ನುವ ಮಾತನ್ನು ಹೇಳಿ ತನ್ನ ಉದಾರವಾದ ಮನಸ್ಸು ಪ್ರಕಟ ಮಾಡಿದ್ದಾಳೆ.

ಆದರೆ ಸೋನಂ ಸಂದರ್ಶನ ಒಂದರಲ್ಲಿ ಕೆಲವರಿಗೆ ರೂಪ ಇಲ್ಲದೆ ಇದ್ದರೂ ಸಹ ತಮ್ಮ ಪ್ರತಿಭೆ ಮೂಲಕ ಸಿನಿಮಾದಲ್ಲಿ ಗೆಲುವನ್ನು ಕಾಣುತ್ತಾರೆ ಎಂದು ಹೇಳಿದ್ದಳು. ಕಂಗನಾ ನಟನೆಯ ರಿವಾಲ್ವರ್ ರಾಣಿ, ಕ್ವೀನ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡುತ್ತಾ. ಈ ಮಾತಿಗೆ ಬೇಸರ ವ್ಯಕ್ತ ಪಡಿಸದ ಕಂಗನಾ ಸೋನಂ ಬಟ್ಟೆ ಬರೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾಳೆ. 
 
ಇತ್ತೀಚಿನ ದಿನಗಳಲ್ಲಿ ಹೀರೋಯಿನ್ ಗಳು ಅತ್ಯುತ್ತಮ ರೀತಿಯಲ್ಲಿ ಉಡುಪುಗಳನ್ನು ಧರಿಸುತ್ತಾ ಇದ್ದಾರೆ. ಜಾಕ್ವೆಲಿನ್ ಉತ್ತಮ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಇರುತ್ತಾಳೆ. ದೀಪಿಕಾ ಪಡುಕೋಣೆ , ಸೋನಮ್ ಸಹ ಅತ್ಯದ್ಭುತವಾಗಿರುವ ಉಡುಪು ಧರಿಸುತ್ತಾರೆ ಎಂದು ಹೇಳಿದ್ದಾಳೆ. ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಇಂಡಿಯಾ ಕೋಶರ್ ವೀಕ್ ಫ್ಯಾಶನ್ ಫ್ಯಾಶನ್ ಶೋನಲ್ಲಿ ಮಾತಾಡುವಾಗ ತನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದಳು ಕಂಗನ.  

Share this Story:

Follow Webdunia kannada