Select Your Language

Notifications

webdunia
webdunia
webdunia
webdunia

ನನಗೆ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲು ಸಕತ್ ಖುಷಿ

ನನಗೆ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲು ಸಕತ್ ಖುಷಿ
ಮುಂಬೈ , ಸೋಮವಾರ, 24 ನವೆಂಬರ್ 2014 (12:20 IST)
ಅಪ್ಪ ಶತ್ರುಘ್ನ ಸಿನ್ಹ ಅವರ ಯಾವ ಗಾಡ್ ಫಾದರ್ ಗಿರಿ ಇಲ್ಲದೆ ದಬಾಂಗ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದಳು ಸೋನಕ್ಷಿ ಸಿನ್ಹ. ಅದು ಅಪರೂಪದ ಯಶಸ್ಸು ಗಳಿಸಿತ್ತು. ಆ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಬಳಿಕ ಆಕೆಗೆ  ನಂತರದ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ರೀತಿಯ ಗೆಲುವು ಸಿಗಲಿಲ್ಲ ಎಂದೇ ಹೇಳ ಬಹುದಾಗಿದೆ. 
 
ಆದರಿಂದ ಸೋನಾಕ್ಷಿ ತಾನೇ ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಆದ್ಯತೆ ನೀಡದೆ ಈಗ ಇಬ್ಬರು ಮೂರು ಜನ ಹೀರೋಯಿನ್ ಗಳು ಇರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ ಎಂದು ಬಾಲಿವುಡ್ ನ ಕುಹುಕಿಗಳು   ಹೇಳುತ್ತಿದ್ದಾರೆ. 
 
ಆದರೆ ಈ ಬಗ್ಗೆ ಆ ಮುದ್ದು ಸುಂದರಿ ಬಳಿ ಕೇಳಿದರೆ ಆಕೆ ಹೇಳುವ ವಿಷಯ ಬೇರೆ. ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸುತ್ತಿರುವುದಕ್ಕೆ ಹೆಚ್ಚು ಖುಷಿಯಾಗಿದೆ ನನಗೆ. ಈಗ ನನ್ನ ಬಗ್ಗೆ ನಾನು ಪ್ರೂವ್ ಮಾಡಿದ್ದೇನೆ. ನನಗೆ ಅಭದ್ರತೆಯ ಭಾವ ಕಾಡುತ್ತಿಲ್ಲ ನನ್ನ ಕೆರಿಯರ್ ಬಗ್ಗೆ ಎಂದು ಹೇಳಿದ್ದಾಳೆ. ಈಗ ಈ ಸುಂದರಿ ಪ್ರಭುದೇವ ನಿರ್ದೇಶನದ ಅಜಯ್ ದೇವಗನ್ ನಟನೆಯ ಆಕ್ಷನ್ ಜಾಕ್ಸನ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾಳೆ.  

Share this Story:

Follow Webdunia kannada