Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಸಿನಿಮಾದಲ್ಲಿ ಅಭಿನಯಿಸಲು ನನಗೆ ಆಫರ್ ಬಂದಿಲ್ಲ

ಸಂಜಯ್ ದತ್ ಸಿನಿಮಾದಲ್ಲಿ ಅಭಿನಯಿಸಲು ನನಗೆ ಆಫರ್ ಬಂದಿಲ್ಲ
, ಮಂಗಳವಾರ, 5 ಜನವರಿ 2016 (10:30 IST)
ಸಂಜಯ್ ಜೀವನಾ ಕಥಾಧಾರಿತ ಸಿನಿಮಾಕ್ಕೆ ಈಗಾಗಲೇ ತಯಾರಿ ಜೋರಾಗಿದೆ. ಸಿನಿಮಾದಲ್ಲಿ ಅವರು ಅಭಿನಯಿಸುತ್ತಾರೆ ಇವರು ಅಭಿನಯಿಸುತ್ತಾರೆ ಅನ್ನೋ ಲೆಕ್ಕಾಟಾರಗಳು ಜೋರಾಗಿವೆ. ಹೀಗಿರುವಾಗಲೇ ನಟಿ ಕಂಗನಾ ನನಗೆ ಸಿನಿಮಾದಲ್ಲಿ ಅಭಿನಯಿಸಲು ಯಾವುದೇ ಆಫರ್‌ಗಳು ಬಂದಿಲ್ಲ ಅಂತಾ ಹೇಳಿದ್ದಾರೆ.

ನಾನು ನನ್ನ ಮುಂದಿನ ಸಿನಿಮಾ ರಂಗೂನ್ ನಲ್ಲಿ ಬ್ಯುಸಿಯಾಗಿದ್ದೇನೆ. ಹಾಗಾಗಿ ನಾನು ಬೇರೆ ಯಾವುದೇ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ಇನ್ನು ಸಂಜಯ್ ದತ್ ಸಿನಿಮಾದಲ್ಲಿ ಅಭಿನಯಿಸೋದಕ್ಕಂತೂ ನನಗೆ ಯಾರಿಂದಲೂ ಯಾವುದೇ ಆಫರ್ ಬಂದಿಲ್ಲ ಅಂತಾ ಕಂಗನಾ ಹೇಳಿದ್ದಾರೆ.ಇನ್ನು ಈ ಹಿಂದೆ ಈ ಸಿನಿಮಾದಲ್ಲಿ ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಕಂಗನಾ ಕಾಣಿಸಿಕೊಳ್ಳುತ್ತಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಇದೀಗ ಈ ಸುದ್ದಿಗಗೆ ತೆರೆ ಬಿದ್ದಿದೆ.
 
ರಾಜ್ ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ರಣ್ ಬೀರ್ ಕಪೂರ್ ಅವರು ಸಿನಿಮಾದಲ್ಲಿ ಸಂಜಯ್ ದತ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಈಗಾಗಲೇ ಸಿನಿಮಾದ ಸ್ಕ್ರಿಫ್ಟಿಂಗ್ ಕೆಲಸಗಳು ಮುಕ್ತಾಯವಾಗಿದೆಯಂತೆ.

Share this Story:

Follow Webdunia kannada