ಹಾಟ್ ನಟಿ ಸಂಜನಾ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಶಿವಣ್ಣನ ಜತೆಗೆ ಸ್ಟೆಪ್ ಹಾಕುತ್ತಿರುವುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಸೆಂಚೂರಿ ಸ್ಟಾರ್ ಶಿವರಾಜಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಜತೆಗೆ ಸ್ಟೆಪ್ ಹಾಕುತ್ತಿರುವ ಸಂಜನಾ ಲಕ್ಕಿ ಅಂತೆ. ಮೈಲಾರಿ ಚಿತ್ರವನ್ನು ನೆನಪಿಸಿಕೊಳ್ಳುವ ಅವರು, ತಮ್ಮ ಕೆರಿಯರ್ನಲ್ಲಿ ಈ ಚಿತ್ರ ಅದ್ಫುತ ಮೂವೀಗಳಲ್ಲಿ ಒಂದು ಎನ್ನುತ್ತಾರೆ.
ಕಬೀರ ಚಿತ್ರ ಇನ್ನೇನು ಒಂದು ವಾರದಲ್ಲಿ ತೆರೆ ಮೇಲೆ ಬರಲಿದೆ. ನನ್ನ ಹಲವು ಚಿತ್ರಗಳು ಒಂದಾದರಂತೆ ತೆರೆ ಕಾಣ್ಬೇಕು ಎಂಬುದು ಸಂಜನಾ ಆಸೆಯಂತೆ...
ನಾವು ಪ್ರೀತಿಯಲ್ಲಿ ಹುಚ್ಚರು ಚಿತ್ರದ ಹಾಡನ್ನು ಕಂಪೋಸ್ ಮಾಡಿದ್ದಾರೆ ಇಸ್ಮಾಯಿಲ್ ದರ್ಬಾರ್, ಹಾಡಿನಲ್ಲಿ ನಟಿಸುತ್ತಿರುವಾಗ ಕಥಕ್ ದೃಶ್ಯದಲ್ಲಿ ನೆಲದ ಮೇಲೆ ಕಾಲುಗಳನ್ನು ಎಳೆಯಬೇಕಿತ್ತು. ಸೆಟ್ ಮೇಲೆ ಬಂದಾಗ ನನಗೆ ಶಾಕ್ ಆಗಿತ್ತು. ಸಿಮೆಂಟ್ ಅಂತಸ್ತಿನ ಮೇಲೆ ನಾನು ಡ್ಯಾನ್ಸ್ ಮಾಡಿದ್ದೇನೆ. ಐದು ದಿನದ ಶೂಟಿಂಗ್ ವೇಳೆ ನನ್ನ ಕಾಲುಗಳಿಗೆ ಹಾಗೂ ಪಾದಕ್ಕೆ ರಕ್ತ ಬಂದಿದ್ದುಂಟು ಎಂದು ಇದೇ ವೇಳೆ ಸಂಜನಾ ಹೇಳಿದ್ದಾರೆ.
ವಿಶಿಷ್ಟ ರೀತಿಯಲ್ಲಿ ಮೂಡಿ ಬರುವ ಈ ಹಾಡಿನಲ್ಲಿ ಸಂಜನಾ ರಾಜ ನರ್ತಕಿಯಂತೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿಯೂ ವಿಶೇಷವಾದ ಹಾಡೊಂದರಲ್ಲಿ ಶಿವಣ್ಣನ ಜತೆಯಾಗಲಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನ ಜತೆಗೆ ಮೈ ಚಳಿ ಬಿಟ್ಟು ಸಂಜನಾ ನರ್ತಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ