Webdunia - Bharat's app for daily news and videos

Install App

ನಗ್ನಳಾಗಿ ನಟಿಸುವುದರಲ್ಲಿ ಸಂಕೋಚವಿಲ್ಲ: ರಾಧಿಕಾ ಆಪ್ಟೆ

Webdunia
ಶನಿವಾರ, 17 ಸೆಪ್ಟಂಬರ್ 2016 (16:17 IST)
ಬಾಲಿವುಡ್ ಚಿತ್ರರಂಗದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕಾಗಿ ಚಲಾವಣೆಯಲ್ಲಿರುವ ಹಾಟ್ ನಟಿ ರಾಧಿಕಾ ಆಪ್ಟೆ, ತಮ್ಮ ಮುಂದಿನ ಚಿತ್ರದ ಬೋಲ್ಡ್ ನಟನೆಗಾಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. 

 
ಲೀನಾ ಯಾದವ್ ನಿರ್ಮಿಸುತ್ತಿರುವ ಪರ್ಚೇದ್ ಚಿತ್ರದಲ್ಲಿ ತನಿಶ್ತಾ ಚಟರ್ಜಿ, ಸುರ್ವಿನ್ ಚಾವ್ಲಾ ಮತ್ತು ಲೆಹರ್ ಖಾನ್ ನಟಿಸುತ್ತಿದ್ದು, ಅಪ್ಟೆಯವರ ಬೋಲ್ಡ್ ನಟನೆ ದಂಗಾಗಿಸಿದೆ. 
 
ನನ್ನ ಸುಂದರವಾದ ದೇಹ ತೋರಿಸಲು ನಾಚಿಕೆಯಾಗುವುದಿಲ್ಲ ಎಂದು ರಾಧಿಕಾ ಹೇಳಿ ನುಲಿದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಆಪ್ಟೆ, ವಿಶ್ವದ ಎಲ್ಲಾ ಭಾಷೆಗಳ ಸಿನೆಮಾಗಳನ್ನು ನೋಡಿ ಬೆಳೆದಿದ್ದೇನೆ. ವಿಶ್ವದಾದ್ಯಂತ ಪ್ರವಾಸ ಮಾಡಿದ್ದೇನೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ನಗ್ನ ನೃತ್ಯಗಳ ಪ್ರದರ್ಶನವನ್ನು ನೋಡಿದ್ದೇನೆ ಎಂದು ಹೇಳಿದ್ದಾಳೆ.
 
ನಾನು ನನ್ನ ಸುಂದರವಾದ ದೇಹವನ್ನು ಪ್ರದರ್ಶಿಸಲು ಯಾಕೆ ನಾಚಿಕೆಪಡಬೇಕು ಎನ್ನುವುದೇ ನನಗೆ ತಿಳಿಯುತ್ತಿಲ್ಲ. ನನ್ನ ದೇಹವೊಂದು ಪ್ರದರ್ಶನ ಸಾಧನ. ನಗ್ನ ದೃಶ್ಯಗಳಲ್ಲಿ ನಟಿಸಲು ಸಂಕೋಚವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ನಾನು ಟೀಕೆಗಳಿಗೆಲ್ಲಾ ಕೇರ್ ಮಾಡೋದಿಲ್ಲ. ನನ್ನ ಕರ್ತವ್ಯವನ್ನು ನಿಭಾಯಿಸಿ ಚಿತ್ರ ಬಿಡುಗಡೆಯಾಗುವುದನ್ನು ಕಾಯುತ್ತೇನೆ. ಇಂತಹ ಆರೋಪಗಳಿಂದ ವಿಚಲಿತಳಾಗುವುದಿಲ್ಲ ಎಂದು ತಿಳಿಸಿದ್ದಾಳೆ.
 
ಬಾಲಿವುಡ್ ನಟ ಅಜಯ್ ದೇವಗನ್ ಪರ್ಚೇದ್ ಚಿತ್ರವನ್ನು ನಿರ್ಮಿಸುತ್ತಿದ್ದು, ಸೆಪ್ಟೆಂಬರ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸಿದರೆ ಸುಮ್ಮನಿರಬೇಕೇ: ಕನ್ನಡ ವಿವಾದಕ್ಕೆ ಸೋನು ನಿಗಂ ಉತ್ತರ

Sonu Nigam: ಸೋನು ನಿಗಂಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Prakash Raj: ಪಾಕಿಸ್ತಾನ ನಟನ ಚಿತ್ರ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ: ಕೇಂದ್ರದ ವಿರುದ್ಧ ಕಿಡಿ ಕಾರಿದ ಪ್ರಕಾಶ್ ರಾಜ್

Sara Tendulkar: ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಗೆ ಹೊಸ ಬಾಯ್ ಫ್ರೆಂಡ್: ಸಾರಾ ಹೊಸ ಹುಡುಗ ಯಾರು ಗೊತ್ತಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಮುಂದಿನ ಸುದ್ದಿ