Select Your Language

Notifications

webdunia
webdunia
webdunia
webdunia

ಆರು ವರ್ಷಗಳ ಹಿಂದೆಯೇ ನನ್ನ ಮದುವೆ ಡೇಟ್ ಫಿಕ್ಸ್ ಆಗಿದೆ: ರಣಬೀರ್ ಕಪೂರ್

ಆರು ವರ್ಷಗಳ ಹಿಂದೆಯೇ ನನ್ನ ಮದುವೆ ಡೇಟ್ ಫಿಕ್ಸ್ ಆಗಿದೆ: ರಣಬೀರ್ ಕಪೂರ್
ಮುಂಬೈ , ಮಂಗಳವಾರ, 28 ಏಪ್ರಿಲ್ 2015 (15:36 IST)
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಜತೆಗಿನ ಪ್ರೇಮ ಸಂಬಂಧದಿಂದಾಗಿ ಸದಾ ಸುದ್ದಿಯಲ್ಲಿರುವ ನಟ ರಣಬೀರ್ ಕಪೂರ್ ತಾವು ಪ್ರೀತಿಯಲ್ಲಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ನಾನು ಈಗಲೇ ಮದುವೆಯಾಗುವ ಯೋಚನೆಯನ್ನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

 
ತಮ್ಮ ಮದುವೆ ಎಂಬುದು ಖಾಸಗಿ ವಿಷಯ ಎಂಬುದನ್ನು ಒತ್ತಿ ಹೇಳಿದ ಅವರು, "ನನಗನ್ನಿಸುವ ಮಟ್ಟಿಗೆ ನೀವಿದನ್ನು ಖಾಸಗಿಯಾಗಿರಲು ಬಿಡಲಾರಿರಿ. ನಾವು ನಟನಾ ವೃತ್ತಿಯಲ್ಲಿರುವವರು. ನನ್ನ ಮದುವೆ ದಿನಾಂಕ 6 ವರ್ಷದ ಮೊದಲೇ ನಿಶ್ಚಯವಾಗಿದೆ. ಇದು ನನ್ನ ಜೀವನದಲ್ಲಿ ವಿಶೇಷ ದಿನವಾಗಿದ್ದು, ಅದನ್ನು ಘೋಷಿಸಲು ನನಗೆ ಅವಕಾಶ ಕೊಡಿ. ಆದರೆ ಸದ್ಯಕ್ಕೆ ಆ ಯೋಚನೆ ಇಲ್ಲ", ಎಂದು ತಮ್ಮ ಮದುವೆಯ ದಿನಾಂಕದ ಬಗ್ಗೆ ವದಂತಿ ಹಬ್ಬಿಸುವ ಮಾಧ್ಯಮಗಳನ್ನುದ್ದೇಶಿಸಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 
 
"ನಾನು ಪ್ರೀತಿಯಲ್ಲಿದ್ದೇನೆ, ನಾನು ಕಮಿಟ್ ಆಗಿದ್ದು ಜವಾಬ್ದಾರಿಯನ್ನು ಹೊಂದಿದ್ದೇನೆ. ಆದರೆ ಮದುವೆಯ ವಿಷಯಕ್ಕೆ ಬಂದರೆ  ಹಲವು ವದಂತಿಗಳು ನನ್ನ ಆನಂದವನ್ನು ಹಾಳುಗೆಡವುತ್ತಿವೆ. ಆದ್ದರಿಂದ ನನ್ನ ಮದುವೆಯ ದಿನದ ಬಗ್ಗೆ ಊಹಾಪೋಹದ ದಿನಾಂಕವನ್ನು ಪ್ರಕಟಿಸುವುದನ್ನು ನಿಲ್ಲಿಸಿ", ಎಂದು ಅವರು ಮಾಧ್ಯಮದವರಲ್ಲಿ ವಿನಂತಿಸಿಕೊಂಡಿದ್ದಾರೆ. 
 
ಕಪೂರ್ ಅವರ ಇತ್ತೀಚಿನ ಎರಡು ಸಿನಿಮಾಗಳಾದ 'ಬೇಷರಮ್' ಮತ್ತು 'ರಾಯ್' ಬಾಕ್ಸ್ ಆಫೀಸ್‌ನಲ್ಲಿ ಟುಸ್ ಎಂದಿವೆ. ಹೀಗಾಗಿ ತಾವು ಅತಿಯಾದ ಒತ್ತಡವನ್ನು ಹೊಂದಿರುವುದಾಗಿ ಹೇಳಿರುವ ಅವರು ಮುಂಬರುವ ಸಿನಿಮಾ ' ಬಾಂಬೈ ವೆಲ್ವೆಟ್' ತಮ್ಮ ಪಾಲಿಗೆ ಗೆಲುವನ್ನು ತಂದುಕೊಡುವುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada