Select Your Language

Notifications

webdunia
webdunia
webdunia
webdunia

ದಾವತ್ ಎ ಇಶ್ಕ್ ನಲ್ಲಿ ತಿಂದು ತಿಂದು ದಪ್ಪಗಾಗಿದ್ದೇನೆ- ಪರಿಣಿತಿ ಚೋಪ್ರ

ದಾವತ್ ಎ ಇಶ್ಕ್ ನಲ್ಲಿ ತಿಂದು ತಿಂದು ದಪ್ಪಗಾಗಿದ್ದೇನೆ- ಪರಿಣಿತಿ ಚೋಪ್ರ
, ಸೋಮವಾರ, 21 ಜುಲೈ 2014 (11:43 IST)
ದಾವತ್ ಎ ಇಶ್ಕ್  ಇದು ಪರಿಣಿತಿ  ಚೋಪ್ರ ಮತ್ತು ಆದಿತ್ಯ ರಾಯ್ ಕಪೂರ್ ಅವರ ಹೊಸ ಚಿತ್ರ. ಇದರಲ್ಲಿ ಪರಿಣಿತಿ ತಿಂಡಿ ತಿನಿಸುಗಳ ಬಗ್ಗೆ ಆಸಕ್ತಿ ಹೊಂದಿರುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಾ ಇದ್ದಾಳೆ. ಈ ಚಿತ್ರವನ್ನು ಹಬೀಬ್ ಫೈಜಲ್ ನಿರ್ದೇಶನ ಮಾಡುತ್ತಿದ್ದಾರೆ.


ಚಿತ್ರದಲ್ಲಿ ಮಾತ್ರವಲ್ಲ ನಿಜ ಬದುಕಲ್ಲೂ ಸಹ ನಾನು ಮತ್ತು ಆದಿತ್ಯ ಆಹಾರಪ್ರಿಯರು. ಹೊಸ ಬಗೆಯ ಆಹಾರ ಸೇವನೆ ಮಾಡಲು ಹೆಚ್ಚು ಇಷ್ಟ ಪಡ್ತೀವಿ. ನಾವು ಉತ್ತಮ ಫ್ರೆಂಡ್ಸ್ ಆಗಿದ್ದೇವೆ.  ಈ ಚಿತ್ರದಲ್ಲಿ ನಾನು ಸೇಲ್ಸ್ ಗರ್ಲ್ ಆಗಿದ್ದೇನೆ, ಬಿರಿಯಾನಿ, ಕಬಾಬ್ ಮಾಡುವ ಅತ್ಯುತ್ತಮ ಶೆಫ್ ಪಾತ್ರದಲ್ಲಿ ಆದಿತ್ಯ ನಟಿಸುತ್ತಿದ್ದಾನೆ.
 
ನಾನು ಸಕತ್ ತಿಂಡಿ ಪೋತಿ ಆದರೆ ನನಗೆ ಒಳ್ಳೆಯ ಸ್ಪರ್ಧಿ ಆಗಿದ್ದಾನೆ ಆದಿ. ಈ ಸಂಗತಿ ನನಗೆ ಸೆಟ್ ನಲ್ಲಿ ಅರ್ಥ ಆಯಿತು . ನಮ್ಮಿಬ್ಬರಿಗೆ ಆಹಾರದ ಸೇವನೆ ಅತ್ಯಂತ ಪ್ರಿಯವಾದ ಸಂಗತಿಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನಾನು ಚೆನ್ನಾಗಿ ತಿನ್ನ ಬೇಕು. ಈ ಕಥೆಯನ್ನು ನನಗಾಗಿಯೇ ಬರೆದದ್ದು ಎಂದು ಅನ್ನಿಸಿದೆ ಎಂದಿದ್ದಾಳೆ ಈ ಭಾಮೆ!
webdunia

ದಾವತ್ ಎ ಇಶ್ಕ್ ಹಾಡುಗಳ ಬಿಡುಗಡೆಗೆಂದು ಆಕೆ ದೆಹಲಿಗೆ ಬಂದಿದ್ದಳು. ಕಳೆದವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಸಂಗತಿ ಹೇಳಿದ್ದಾಳೆ. ಹೈದರಾಬಾದ್ ಹುಡುಗಿ ಆಗಿರುವ ಪರಿಣಿತ ಇದರಲ್ಲಿ ಸೇಲ್ಸ್ ಗರ್ಲ್ ಪಾತ್ರದಲ್ಲಿ ನಟಿಸುತ್ತಾ ಇದ್ದಾಳೆ. ಹೈದರಾಬಾದ್, ಮುಂಬೈ ಮತ್ತು ಲಕ್ನೋ ನಗರದಲ್ಲಿ ಚಿತ್ರೀಕರಣ ಆಗುತ್ತಿದೆ. ತಾನು ಅತಿಯಾಗಿ ತಿಂದು ತನ್ನ ತೂಕ ಹೆಚ್ಚಿಸಿಕೊಂಡಿರುವುದಾಗಿ ಈ ಚೆಲುವೆ ಹೇಳಿದ್ದಾಳೆ.
 
 ಹಬೀಬ್ ಅವರ ಇಶ್ಕ್ ಜಾದೆ  ಚಿತ್ರಕ್ಕೆಂದು ಆಕೆ ಕೆಲವು ದಿನಗಳ ಕಾಲ ಲಕ್ನೋ ನಗರದಲ್ಲಿ ಇರಬೇಕಾಯಿತಂತೆ .ಆ ಸಮಯದಲ್ಲಿ ಆಕೆಗೆ ಅಲ್ಲಿನ ಎಲ್ಲ ಹೋಟೆಲ್ಗಳ ಪರಿಚಯ ಮಾಡಿಕೊಂಡಿದ್ದಾಳೆ ಈ ಹುಡುಗಿ. ಆ ಚಿತ್ರದಲ್ಲಿ ಮುಸ್ಲಿಂ ಯುವತಿ ಆಗಿ ನಟಿಸಿದ್ದ ಈಕೆ ಈ ಚಿತ್ರದಲ್ಲೂ ಸಹ ಮುಸ್ಲಿಂ ಯುವತಿಯ ಪಾತ್ರದಲ್ಲಿ ತನ್ನ ಪ್ರತಿಭೆ ತೋರುತ್ತಾ ಇದ್ದಾಳೆ. 

Share this Story:

Follow Webdunia kannada