Webdunia - Bharat's app for daily news and videos

Install App

ಸನ್ನಿ ಲಿಯೋನ್ 87 ಕೋಟಿ ರೂಪಾಯಿ ಆಸ್ತಿಯ ಒಡತಿ, ಸಂಪಾದನೆ ಹೇಗೆ ಮಾಡ್ತಾಳೆ ಗೊತ್ತಾ?

Webdunia
ಗುರುವಾರ, 18 ಆಗಸ್ಟ್ 2016 (11:45 IST)
ಕೆನಡಾದ ಸಾರ್ನಿಯಾ ಓಂಟಾರಿಯೋ ನಗರದಲ್ಲಿ 13ನೇ ಮಾರ್ಚ್ 1981 ರಂದು ಜನಿಸಿ ಪೋರ್ನ್‌ಸ್ಟಾರ್‌ನಿಂದ ಬಾಲಿವುಡ್ ಹಾಟ್ ನಟಿಯಾದ ಸನ್ನಿ ಲಿಯೋನ್‌ಗೆ 35 ವರ್ಷಗಳು ತುಂಬಿವೆ. ಆಕೆ ಚಿತ್ರರಂಗದಲ್ಲಿ ಗಳಿಸಿದ ಆಸ್ತಿ ಬರೋಬ್ಬರಿ 87 ಕೋಟಿ ರೂಪಾಯಿಗಳಂತೆ.


 
ವರದಿಗಳ ಪ್ರಕಾರ, ಸನ್ನಿ ಲಿಯೋನ್ ಒಂದು ಚಿತ್ರದಲ್ಲಿ ನಟಿಸಲು ಪಡೆಯುವ ಸಂಭಾವನೆ ನಾಲ್ಕು ಕೋಟಿ ರೂಪಾಯಿಗಳು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಸನ್ನಿ ಲಿಯೋನ್ ಪೋರ್ನ್ ಉದ್ಯಮವನ್ನು ತೊರೆದಿರಬಹುದು. ಆದಾಗ್ಯೂ ಆಕೆಗೆ ಹೆಚ್ಚಿನ ಆದಾಯ ಅಡಲ್ಟ್ ವೆಬ್‌ಸೈಟ್‌ನಿಂದ ಬರುತ್ತದೆಯಂತೆ.
ಇದನ್ನು ಹೊರತುಪಡಿಸಿ, ಮಾಡಲಿಂಗ್, ಎಂಡೋರ್ಸ್‌ಮೆಂಟ್, ರಿಯಾಲಿಟಿ ಶೋ, ಸ್ಟೇಜ್ ಶೋ ಮತ್ತು ಬಾಲಿವುಡ್ ಚಿತ್ರಗಳು ಆಕೆಯ ಆದಾಯವನ್ನು ಹೆಚ್ಚಿಸಿವೆ.
 

ಆಕೆಯ ಪತಿ ಕೂಡಾ ಅಡಲ್ಟ್ ಉದ್ಯಮದ ಸ್ಟಾರ್ 
ಸನ್ನಿ ಪತಿ ಡೇನಿಯಲ್ ವೆಬರ್ ಕೂಡಾ ಅಡಲ್ಟ್ ಉದ್ಯಮದಲ್ಲಿ ಚಲಾವಣೆಯಲ್ಲಿರುವ ನಟ. ಕಳೆದ 2011ರಲ್ಲಿ ಸನ್ನಿ ಮತ್ತು ಡೇನಿಯಲ್ ವಿವಾಹ ಬಂಧನಕ್ಕೆ ಒಳಗಾಗಿದ್ದರು. 
 

ಬಿಗ್‌ಬಾಸ್‌ನಲ್ಲಿ ಪ್ರವೇಶ ಪಡೆದ ಸನ್ನಿ ಬಾಲಿವುಡ್ ನಟಿಯಾದಳು.
ಕಳೆದ 2011 ರಲ್ಲಿ ಬಿಗ್‌ಬಾಸ್‌ಗೆ ಸ್ಪರ್ಧಾಳುವಾಗಿ ಪ್ರವೇಶ ಪಡೆದಿದ್ದ ಸನ್ನಿ ಲಿಯೋನ್‌ಳನ್ನು ಬಿಗ್‌ ಬಾಸ್‌ಗೆ ಭೇಟಿ ನೀಡಿದ ಬಾಲಿವುಡ್ ಚಿತ್ರ ನಿರ್ಮಾಪಕ ಮಹೇಶ್ ಭಟ್ ತನ್ನ ಪುತ್ರಿ ಪೂಜಾ ಭಟ್ ನಿರ್ಮಿಸುತ್ತಿರುವ ಜಿಸ್ಮ್ -2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದರು. 
 

ಮೊದಲ ಚಿತ್ರವೇ ಫ್ಲಾಪ್
ಸನ್ನಿ ಲಿಯೋನ್ ನಟಿಸಿದ ಮೊದಲ ಚಿತ್ರ ಜಿಸ್ಮ್-2 ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಕಮಾಲ್ ಮಾಡಲಿಲ್ಲ. ಆದರೆ, ಆಕೆಗೆ ನಟನೆಗಾಗಿ ಹೊಸ ದ್ವಾರವೊಂದು ತೆರೆದಂತಾಯಿತು.  
 

ರಾಗಿಣಿ ಎಸ್‌ಎಂಎಸ್ 2 ಸೂಪರ್ ಹಿಟ್
ಜಿಸ್ಮ್-2 ಚಿತ್ರದ ನಂತರ ಸನ್ನಿ ಲಿಯೋನ್, ಜಾಕ್‌ಪಾಟ್, ರಾಗಿಣಿ ಎಸ್‌ಎಂಎಸ್ 2, ಏಕ್ ಪಹೇಲಿ ಲೀಲಾ, ಕುಚ್ ಕುಚ್ ಲೋಚಾ ಹೈ, ಮಸ್ತಿಜಾದೆನಂತಹ ಚಿತ್ರಗಳಲ್ಲಿ ನಟಿಸಿದಳು. ಅದರಲ್ಲಿ ರಾಗಿಣಿ ಎಸ್‌ಎಂಎಸ್ ಸೂಪರ್ ಹಿಟ್ ಚಿತ್ರವಾಗಿತ್ತು.
 
ಸನ್ನಿ ಲಿಯೋನ್ ಶೂಟೌಟ್ ಎಟ್ ವಾಡ್ಲಾ, ಹೇಟ್ ಸ್ಟೋರಿ 2, ಬಲವಿಂದರ್ ಫೇಮಸ್ ಹೋ ಗಯಾ ಮತ್ತು ಸಿಂಗ್ ಇಸ್ ಬ್ಲಿಂಗ್ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾಳೆ. 
 

ಬಾಲಿವುಡ್ ಬಾದ್‌ಶಾ ಶಾರುಕ್ ಕಾನ್ ಚಿತ್ರದಲ್ಲಿ ಸನ್ನಿ ನಟನೆ
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ನಟನೆಯ ರಯೀಸ್ ಚಿತ್ರದ ಐಟಂ ಸಾಂಗ್‌ನಲ್ಲಿ ನಟಿಸಲಿದ್ದಾಳೆ. ಅದನ್ನು ಹೊರತುಪಡಿಸಿ ಬೇಮಾನ್ ಲವ್ ಮತ್ತು ಟೀನಾ ಆಂಡ್ ಲೋಲೋ ಚಿತ್ರಗಳು ಕೂಡಾ ಶೀಘ್ರದಲ್ಲಿ ಬಿಡುಗಡೆಯಾಗಲಿವೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ
Show comments