Select Your Language

Notifications

webdunia
webdunia
webdunia
webdunia

ಹೈದರ್ ಯಶಸ್ಸು ನೀಡುವ ಚಿತ್ರ.. ಜನ ಬಯಸುವ ಭಿನ್ನತೆ ಇದರಲ್ಲಿದೆ- ಶ್ರದ್ಧಾ ಕಪೂರ್

ಹೈದರ್  ಯಶಸ್ಸು ನೀಡುವ ಚಿತ್ರ.. ಜನ ಬಯಸುವ ಭಿನ್ನತೆ ಇದರಲ್ಲಿದೆ- ಶ್ರದ್ಧಾ ಕಪೂರ್
, ಮಂಗಳವಾರ, 26 ಆಗಸ್ಟ್ 2014 (09:58 IST)
ವಿಶಾಲ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಸಿದ್ಧ ಆಗುತ್ತಿರುವ ಚಿತ್ರ ಹೈದರ್. ಇದರ ಮುಖ್ಯ ಭೂಮಿಕೆಯಲ್ಲಿ ಶ್ರದ್ಧಾ  ಕಪೂರ್ ಮತ್ತು ಶಾಹಿದ್ ಕಪೂರ್ ನಟಿಸಿದ್ದಾರೆ. ವಿಲಿಯಂ ಶೇಕ್ಸ್ಪಿಯರ್ ಅವರು ರಚನೆಯ ಒಂದು ಕೃತಿಯನ್ನು ಆಧರಿಸಿದೆ ಈ ಚಿತ್ರ. ಒಂದು ಭಿನ್ನವಾದ ಸಿನಿ ಪ್ರಪಂಚದಲ್ಲಿ ಇರುವಂತೆ ಮೊದಲ ಸರ್ತಿ ಅನ್ನಿಸಿದೆ. ನನ್ನನ್ನು ನಾನು ನೋಡಿ ಆಶ್ಚರ್ಯ ಚಕಿತಳಾಗಿದ್ದೇನೆ. ವೀಕ್ಷಕರು ಸಹಿತ ಅನೇಕ ಬಗೆಯ  ಪಾತ್ರಗಳನ್ನೂ ವೀಕ್ಷಿಸಲು ಆಶಿಸುತ್ತಾರೆ.


ಅದೇ ರೀತಿ ನನಗೂ ಸಹಿತ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಲು ಇಷ್ಟ. ಬದುಕು ಬದಲಾದ ಭಾವ ಉಂಟಾಗುತ್ತಿದೆ ಎನ್ನುವ ಮಾತನ್ನು ಹೇಳಿದ್ದಾಳೆ ಈ ಮುದ್ದು ಸುಂದರಿ ಶ್ರದ್ಧಾ ಕಪೂರ್. ಶಾಹಿದ್ ನಟನೆ ಅದ್ಭುತ. ಅಂತಹ ಕಲಾವಿದರ ಜೊತೆ ನಟಿಸುವುದು ಅತ್ಯಂತ ಖುಷಿಯ ಸಂಗತಿ ಎಂದು ಹೇಳಿದ್ದಾಳೆ ಆಕೆ. 
 
 ಈ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯಿತು. ಅದಕ್ಕಾಗಿ ಶ್ರದ್ಧಾ ಮೊದಲೇ ಕಾಶ್ಮೀರಕ್ಕೆ ಹೋಗಿ ಅಲ್ಲಿನ ಭಾಷೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದನ್ನು ಈ ಸಮಯದಲ್ಲಿ ಈ ಚೆಲುವೆ ನೆನಪಿಸಿಕೊಂಡಳು. ಅಬ್ಬರದಿಂದ ಬ್ಯಾಂಗ್ ಬ್ಯಾಂಗ್ ಹಾಗೂ ಗುಪ್ತ ಗಾಮಿನಿಯಂತೆ  ಹೈದರ್ ಅಕ್ಟೋಬರ್ 2ರಂದು ಪ್ರೇಕ್ಷಕರನ್ನು ರಂಜಿಸಲು ಬರುತ್ತಿವೆ.ಹೈದರ್ ಚಿತ್ರದ ಟ್ರೈಲರ್ ಗೂ  ಸಹಿತ ಉತ್ತಮವಾದ ಪ್ರತಿಕ್ರಿಯೆ ಲಭಿಸಿದೆ. ಸಿನಿಮಾ ಒಳ್ಳೆಯ ಫಲಿತಾಂಶ ನೀಡುತ್ತದೆ ಎನ್ನುವ ಭಾವನೆ ಹೊಂದಿದ್ದಾಳೆ ಈ ಚೆಲುವೆ .. ಆಕೆಯ ಆಶಯದಂತೆ ಆಗಲಿ.

Share this Story:

Follow Webdunia kannada