Select Your Language

Notifications

webdunia
webdunia
webdunia
webdunia

ಇಮ್ತಿಯಾಜ್ ಅಲಿ ಮುಂದಿನ ಸಿನಿಮಾದಲ್ಲಿ ಅಭಿನಯಿಸ್ತಾರಾ ಶಾರುಖ್ ಖಾನ್ ?

ಇಮ್ತಿಯಾಜ್ ಅಲಿ ಮುಂದಿನ ಸಿನಿಮಾದಲ್ಲಿ ಅಭಿನಯಿಸ್ತಾರಾ ಶಾರುಖ್ ಖಾನ್ ?
, ಸೋಮವಾರ, 8 ಫೆಬ್ರವರಿ 2016 (10:51 IST)
ತಮಾಷಾ ಸಿನಿಮಾದಲ್ಲಿ ಮಾಜಿ ಪ್ರೇಮಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಕಪೂರ್ ಅವರನ್ನು ತೆರೆ ಮೇಲೆ ಒಂದುಗೂಡಿಸಿದ್ದ ನಿರ್ದೇಶಕ ಇಮ್ತಿಯಾಜ್ ಅಲಿ ತಮಾಷಾ ಸಿನಿಮಾದ ಬಳಿಕ ಇದೀಗ ಮತ್ತೊಂದು ಸಿನಿಮಾ ಮಾಡುವ ಪ್ಲಾನ್ ನಲ್ಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಶುರು ಮಾಡಿಕೊಂಡಿದ್ದಾರೆ.

ತಮಾಷಾ ಸಿನಿಮಾ ಇಮ್ತಿಯಾಜ್ ಅಲಿ ಅವರಿಗೆ ಅಂದುಕೊಂಡಷ್ಟು ಯಶಸ್ಸು ತಂದುಕೊಡಲಿಲ್ಲ. ಇದೀಗ ಇಮ್ತಿಯಾಜ್ ಅಲಿ ತಮ್ಮ ಮುಂದಿನ ಸಿನಿಮಾಗೆ ಪ್ಲಾನ್ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಬಾರಿ ಇಮ್ತಿಯಾಜ್ ಅಲಿ ತಮ್ಮ ಸಿನಿಮಾಗೆ ಶಾರುಖ್ ಖಾನ್ ಅವರನ್ನು ಹೀರೋ ಮಾಡೋ ಪ್ಲಾನ್ ನಲ್ಲಿದ್ದಾರೆ. ಈಗಾಗಲೇ ಈ ಬಗ್ಗೆ ಶಾರುಖ್ ಅವರ ಜೊತೆ ಈ ಬಗ್ಗೆ ಇಮ್ತಿಯಾಜ್ ಮಾತುಕತೆ ಕೂಡ ನಡೆಸಿದ್ದಾರಂತೆ. ಅಂದ್ಹಾಗೆ ಇಮ್ತಿಯಾಜ್ ಶಾರುಖ್ ಅವರ ಜೊತೆ ಅವರು ಸಿನಿಮಾದಲ್ಲಿ ಅಭಿನಯಿಸುವಾಗಲೇ ಈ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ರಂತೆ.
 
ಇನ್ನು ಇಮ್ತಿಯಾಜ್ ಅಲಿ ಅವರ ಸಿನಿಮಾದಲ್ಲಿ ಈ ಹಿಂದೆ ಅಭಿನಯಿಸಲು ಶಾರುಖ್ ಅವರನ್ನು ಕೇಳಿಕೊಂಡ ಅವರು ಸಿನಿಮಾದ ಸ್ಕ್ರಿಫ್ಟ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅದನ್ನು ರಿಜೆಕ್ಟ್ ಮಾಡಿದ್ರಂತೆ.ಆದ್ರೆ ಇದೀಗ ಸ್ಕ್ರಿಫ್ಟ್ ನಲ್ಲಿ ಇಮ್ತಿಯಾಜ್ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಶಾರುಖ್ ಒಪ್ಪಿಕೊಂಡಿದ್ದಾರೆ ಅಂತಾ ಹೇಳಲ್ತಾಗಿದೆ.

Share this Story:

Follow Webdunia kannada