Webdunia - Bharat's app for daily news and videos

Install App

ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ ಸಲ್ಮಾನ್ ಖಾನ್ - ಮುನ್ನಿ

Webdunia
ಶನಿವಾರ, 27 ಆಗಸ್ಟ್ 2016 (09:14 IST)
ಭಜರಂಗಿ ಭಾಯಿಜಾನ್ ಸಿನಿಮಾ ನೋಡಿದ ಮಂದಿಗೆ ಇಂದಿಗೂ ನೆನಪಿನಲ್ಲಿ ಉಳಿದಿರುವ ಪಾತ್ರ ಅಂದ್ರೆ ಮುನ್ನಿ ಪಾತ್ರ. ಸಿನಿಮಾದಲ್ಲಿ ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾ ಪಾತ್ರ ನೋಡಿದವರು ಅಯ್ಯೋ ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ದೊಡ್ಡ ಪಾತ್ರ ನಿರ್ವಹಿಸಿದ್ದಾಳೆ ಅಂತಾ ಹಾಡಿ ಹೊಗಳಿದ್ದರು.


ಅದರಲ್ಲು ಸಲ್ಮಾನ್ ಖಾನ್ ಹಾಗೂ ಹರ್ಷಾಲಿ ಮಲ್ಹೋತ್ರಾ ಕಾಂಬಿನೇಷನ್ ವರ್ಣಿಸಲಾಗದ್ದು. ಇದೀಗ ಹರ್ಷಾಲಿ ಹಾಗೂ ಸಲ್ಮಾನ್ ಖಾನ್ ಅವರು ಮತ್ತೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಅಂದ್ಹಾಗೆ ಇವರಿಬ್ಬರು ಮತ್ತೆ ಯಾವ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸಲಿದ್ದಾರೆ ಅಂತಾ ತಲೆಕೆಡಿಸಿಕೊಳ್ಳಬೇಡಿ ಅಂದ್ಹಾಗೆ ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿರೋದು ಯಾವುದೋ ಸಿನಿಮಾದಲ್ಲಲ್ಲ. ಬದಲಾಗಿ ಜಾಹೀರಾತೊಂದರಲ್ಲಿ. ಬಿಸ್ಕತ್ತೊಂದರ ಜಾಹೀರಾತಿನಲ್ಲಿ ಇವರಿಬ್ಬರು ಜೊತೆಯಾಗಿ ಅಭಿನಯಿಸಲಿದ್ದಾರಂತೆ.ಅಂದ್ಹಾಗೆ ಅಚ್ಚರಿಯ ವಿಚಾರ ಅಂದ್ರೆ ಈ ಜಾಹೀರಾತಿನಲ್ಲಿ ಸಲ್ಮಾನ್ ಹಾಗೂ ಹರ್ಷಾಲಿ ಮಲ್ಹೋತ್ರಾ ಅವರು ಜೊತೆಯಾಗಿ ಅಭಿನಯಿಸಿದ್ದ ಭಜರಂಗಿ ಭಾಯಿಜಾನ್ ಸಿನಿಮಾದ ಸೆಲ್ಫಿ ಲೇ ಲಾರೆ ಹಾಡನ್ನು ಈ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗುತ್ತಿದೆಯಂತೆ.
 
ಇನ್ನು ಹರ್ಷಾಲಿ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಅವರೊಂದಿಗೆ ಕಳೆದಿರುವ ಕ್ಷಣಗಳ ಫೋಟೋಗಳನ್ನು ಹರ್ಷಾಲಿ ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಹರ್ಷಾಲಿ ಯಾವಾಗಲೂ ಸಲ್ಮಾನ್ ಖಾನ್ ಅವರ ಜೊತೆ ಸಮಯ ಕಳೆಯೋದಕ್ಕೆ ಇಷ್ಟಪಡುತ್ತಾಳೆ. ಹರ್ಷಾಲಿ ಅಂದ್ರೆ ಸಲ್ಮಾನ್ ಖಾನ್ ಅವರಿಗೂ ತುಂಬಾನೇ ಇಷ್ಟ ಅಂತಾ ಅವರು ಹೇಳಿದ್ದಾರೆ. ಇನ್ನು ಈ ಜಾಹೀರಾತು ಅತೀ ಶೀಘ್ರದಲ್ಲಿ ಪ್ರಸಾರವಾಗಲಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಹರ್ಷಾಲಿ ಮಲ್ಹೋತ್ರಾ ಸಲ್ಮಾನ್ ಖಾನ್,

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments