Webdunia - Bharat's app for daily news and videos

Install App

ಗಾಂಧಿ ಹೆಸರಲ್ಲಿ ಎಲ್ಲವೂ ಯಾಕಿದೆ? ನೆಹರು,ಗಾಂಧಿ ಕುಟುಂಬದ ಮೇಲೆ ರಿಷಿ ಕಪೂರ್ ದಾಳಿ

Webdunia
ಬುಧವಾರ, 18 ಮೇ 2016 (18:08 IST)
ಹಿರಿಯ ನಟ ರಿಷಿ ಕಪೂರ್ ಗಾಂಧಿ -ನೆಹರು ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡುವುದರ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿರುವ ರಿಷಿ ಕಪೂರ್. ದೇಶದ ಪ್ರತಿಯೊಂದು ಸಂಪತ್ತು ಗಾಂಧಿ ಹಾಗೂ ನೆಹರು ಹೆಸರಲ್ಲಿ ಯಾಕಿದೆ? ಎಂದು ಕೇಳಿದ್ದಾರೆ.

 
ಪ್ರಸ್ತುತ ಸರ್ಕಾರವನ್ನು ಮನವಿ ಮಾಡಿರುವ ರಿಷಿ ಕಪೂರ್, ದೇಶದ ಸಂಪತ್ತುಗಳಲ್ಲಿ ಇರುವಂತಹ ಹೆಸರುಗಳನ್ನು ಬದಲಾವಣೆ ಮಾಡುವಂತೆ ಕೇಳಿ ಕೊಂಡಿದ್ದಾರೆ. ಸಮಾಜಕ್ಕೆ ಕೊಡುಗೆ ನೀಡಿರುವ ವ್ಯಕ್ತಿಗಳ ಹೆಸರುಗಳನ್ನು ಮರು ನಾಮಕರಣ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
 
ಕಾಂಗ್ರೆಸ್‌ನ ಗಾಂಧಿ ಪರಿವಾರದ ಹೆಸರಲ್ಲಿ ಇಟ್ಟಿರುವಂತಹ ದೇಶದ  ಪ್ರಮುಖ ರಸ್ತೆ, ವಿಮಾನ ನಿಲ್ದಾಣ.. ಐತಿಹಾಸಿಕ ತಾಣಗಳ ಹೆಸರು ಬದಲಾವಣೆ ಮಾಡಬೇಕು... ಬಾದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಲತಾ ಮಂಗೇಶ್ಕರ್ ಅಥವಾ ಜೆಆರ್‌ಟಿ ಟಾಟಾ ಲಿಂಕ್ ರಸ್ತೆ ಹೆಸರಿಸುವಂತೆ ಕೋರಿದ್ದಾರೆ.
 
ಇದೇ ವೇಳೆ' 'ಬಾಪ್ ಕಾ ಮಾಲ್ ಸಮಛಾ ರಖಾ ಥಾ' ಎಂದು ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇಂದಿರಾ ಗಾಂಧಿ ಹೆಸರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇಕೆ? ಆದ್ರೆ ಅಲ್ಲಿ ಮಹಾತ್ಮ ಗಾಂಧಿ ಹಾಗೂ ಭಗತ್ ಸಿಂಗ್ ಹೆಸರೇಕೆ ಇಲ್ಲ. ಅಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ನನ್ನ ಹೆಸರಲ್ಲಿ ಯಾಕೆ ನಾಮಕರಣ ಮಾಡಿಲ್ಲ ಎಂದು ರಿಷಿ ಕಪೂರ್ ಪ್ರಶ್ನೆ ಮಾಡಿದ್ದಾರೆ.
 
ಅದಲ್ಲದೇ ಫಿಲ್ಮಂ ಸಿಟಿ ಹೆಸರು ದಿಲೀಪ್‌ಕುಮಾರ್, ದೇವಾನಂದ, ಅಶೋಕ್ ಕುಮಾರ್, ಅಥವಾ ಅಮಿತಾಬ್ ಬಚ್ಚನ್ ಹೆಸರಲ್ಲಿ ಇರಬೇಕು ಎಂದು ಒತ್ತಾಯ ಮಾಡಿರುವ ಅವರು,. ಇನ್ನೂ ಪ್ರಮುಖ ಪೌರಾಣಿಕ ಐತಿಹಾಸಿಕ ತಾಣಗಳಲ್ಲಿ ಮೊಹಮ್ಮದ್ ರಫಿ, ಮುಕೇಶ್, ಕಿಶೋರ್ ಕುಮಾರ್ ಹೆಸರುಗಳನ್ನು ಮರು ನಾಮಕರಮ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

ಮುಂದಿನ ಸುದ್ದಿ
Show comments