Select Your Language

Notifications

webdunia
webdunia
webdunia
webdunia

ಹಣ ಸಂಪಾದಿಸುವುದಷ್ಟೇ ಹನ್ಸಿಕಾ ಮೋಟ್ವಾನಿ ಬದುಕಿನ ಗುರಿಯಲ್ಲವಂತೆ

ಹಣ ಸಂಪಾದಿಸುವುದಷ್ಟೇ  ಹನ್ಸಿಕಾ ಮೋಟ್ವಾನಿ  ಬದುಕಿನ ಗುರಿಯಲ್ಲವಂತೆ
, ಸೋಮವಾರ, 13 ಏಪ್ರಿಲ್ 2015 (11:05 IST)
ಮನುಷ್ಯನ ಬದುಕಿನಲ್ಲಿ ಸಂತೋಷವಾಗಿರುವುದಕ್ಕೆಂದೇ ಸಾಕಷ್ಟು ಪ್ರಯತ್ನ ಪಡುತ್ತಿರುತ್ತಾನೆ. ಆತ ಏನೇ ಮಾಡಿದರೂ ಅದು ಆನಂದವಾಗಿರಲೆಂದೇ ಎನ್ನುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅಂತಹವರಲ್ಲಿ ಕೆಲವರು ಎಷ್ಟೇ ಹಣ ಬಂದರೂ ಸಹಿತ ಮತ್ತೆ ಮತ್ತೆ ಹಣಕಾಗಿ ಒದ್ದಾಡುತ್ತಿರುತ್ತಾರೆ. ಆದರೆ ಕಾಲಿವುಡ್ ನಟಿ ಹನ್ಸಿಕಾ ಆ ಪೈಕಿಯಲ್ಲ. ಆಕೆ ತಾನು ತನಗಾಗಿ ಹಣ ಸಂಪಾದಿಸುತ್ತಿಲ್ಲ ಎಂದು ಹೇಳುತ್ತಾಳೆ.

ಕಾಲಿವುಡ್ ನಲ್ಲಿ ಅತಿ ಬೇಡಿಕೆಯ ನಟಿ ನಯನತಾರ ಬಳಿಕ ಅವಕಾಶ ಪಡೆದ ನಟಿ ಹನ್ಸಿಕಾ ಮೋಟ್ವಾನಿ. ಆಕೆಯು ಅರಣ್ಮಣೈ, ಆಂಬಳ ಹೀಗೆ ಅನೇಕ ಚಿತ್ರಗಳಲ್ಲಿ ಗೆಲುವಿನ ಸರಮಾಲೆ ಪಡೆಯುತ್ತಿದ್ದಾಳೆ. ಈ ಚೆಲುವೆ ತನ್ನ ಮಾಜಿ ಪ್ರೇಮಿ ಶಿಂಬು ಜೊತೆ ಅಭಿನಯಿಸಿದ ವಾಲು ಪ್ರದರ್ಶನ ಕಾಣುತ್ತಿದೆ. 
 
ಶಿಂಬು ಅಲ್ಲದೆ ಜಯಂ ರವಿ ಅವರ ಜೊತೆ ನಟಿಸುತ್ತಿರುವ ರೋಮಿಯೋ ಜ್ಯೂಲಿಯೆಟ್, ಇಳಯದಳಪತಿ ವಿಜಯ್ ಜೊತೆ ಅಭಿನಯಿಸುತ್ತಿರುವ ಪುಲಿ, ನಟಿ ಜಯಪ್ರದ ಅವರ ಮಗ ಸಿದ್ಧಾರ್ಥ್ ಜೊತೆಗೆ ನಟಿಸುತ್ತಿರುವ ಡಿಯರ್ ಡಿಯರ್, ಉದಯನಿಧಿ  ಸ್ಟಾಲಿನ್  ಅವರ ಜೊತೆ ಅಭಿನಯಿಸುತ್ತಿರುವ ಇದಯಂ ಮುರಳಿ ಎನ್ನುವ ಚಿತ್ರ ಸೇರಿದಂತೆ ಈಗ ಆಕೆ ಕೈಲಿ ಸುಮಾರು ಆರು ಚಿತ್ರಗಳಿವೆ. ಇಷ್ಟೆಲ್ಲಾ ನಡುವೆ ಇನ್ನು ಹೊಸ ಹೊಸ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಲೇ ಇವೆ ಎನ್ನುತ್ತಿದ್ದಾರೆ ಕಾಲಿವುಡ್ ಜನರು. 
 
ಇಷ್ಟೆಲ್ಲಾ  ಅವಕಾಶಗಳು ಇದ್ದಾಗಲೂ ಆಕೆ ತಾನು ತನ್ನ ಬದುಕನ್ನು ಹಣ ಸಂಪಾದನೆ ಮಾಡುವುದಕ್ಕೆ ಮೀಸಲಾಗಿಟ್ಟಿಲ್ಲ ಎಂದು ಹೇಳುತ್ತಿದ್ದಾಳೆ. ಒಂದು ಸಂದರ್ಶನದಲ್ಲಿ ಆಕೆ ತಾನು ಬೇರೊಂದು ವಿಷಯಕ್ಕೆ ಸಂಬಂಧ ಪಟ್ಟಂತೆ ಬಹಳಷ್ಟು ಕಷ್ಟ ಪಟ್ಟು ಹಣ ಸಂಪಾದನೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಹಾಗೆಂದು ಹಣ ಗಳಿಕೆ ಮಾಡುವುದೇ ತನ್ನ  ಧ್ಯೇಯವಲ್ಲ ಎನ್ನುವ ಮಾತನ್ನು  ಸಹಿತ ಈ ಸಮಯದಲ್ಲಿ ಆಕೆ ಹೇಳಿದ್ದಾಳೆ. ತನಗೆ ಅಗತ್ಯವಾದ ಸಂಗತಿಗಳಿಗೆ ಮಾತ್ರ  ಆಕೆ ಗಮನ ನೀಡುವುದಿಲ್ಲವಂತೆ.
 
ಹನ್ಸಿಕಾ ಅನೇಕ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾಳೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅವರ ಮುಂದಿ ಭವಿಷ್ಯ ಉಜ್ವಲ ಮಾಡುವ ಸಲುವಾಗಿ ಈ ತಾರೆ ಬಹಳ ಕಷ್ಟ ಪಡುತ್ತಿದ್ದಾಳೆ ಎನ್ನುವ ಸಂಗತಿ ಈ ಮೀಡಿಯಾ ಮೇಲಾಣೆ ನೂರಕ್ಕೆ ನೂರರಷ್ಟು ಸತ್ಯ. 

Share this Story:

Follow Webdunia kannada