Select Your Language

Notifications

webdunia
webdunia
webdunia
webdunia

ಗೋವಾದಲ್ಲಿ ಗುಲಾಬಿ ಸ್ಟ್ರೀಟ್ ಹುಡುಗಿಯರು...!

ಗೋವಾದಲ್ಲಿ ಗುಲಾಬಿ ಸ್ಟ್ರೀಟ್  ಹುಡುಗಿಯರು...!
ಬೆಂಗಳೂರು , ಶುಕ್ರವಾರ, 9 ಮೇ 2014 (10:33 IST)
'ಗುಲಾಬಿ ಸ್ಟ್ರೀಟ್‌' ಚಿತ್ರಕಲಾವಿದ ಬಿಕೆಎಸ್‌ ವರ್ಮ ಅವರ ಪುತ್ರ ಪ್ರದೀಪ್‌ ಕುಮಾರ್‌ ವರ್ಮ ಅವರ ಚೊಚ್ಚಲ ನಿರ್ದೇಶನದ ಚಿತ್ರ.ಭಾವನಾ ರಾವ್‌, ಶ್ವೇತಾ ಪಂಡಿತ್‌ ಮತ್ತು ಹರ್ಷಿಕಾ ಪೂಣಚ್ಚ ಅವರನ್ನೊಳಗೊಂಡ ಫೋಟೋಶೂಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ದೊರೆತಿವೆ. 
 
'ಗುಲಾಬಿ ಸ್ಟ್ರೀಟ್‌'  ನೈಜ ಘಟನೆ ಇಟ್ಟುಕೊಂಡು ಹೆಣೆದಿರುವ ಕಥೆಯಾಗಿರುವುದರಿಂದ ಕಥೆಗೆ ಹೆಚ್ಚು ಮಹತ್ವ ಇದೆ ಎನ್ನುತ್ತಾರೆ ನಿರ್ದೇಶಕರು. ಕನ್ನಡದಲ್ಲಿ ಇದುವರೆಗೆ ಬರದೇ ಇರುವಂತಹ ಫಾರ್ಮುಲ ಬಳಸಿಕೊಂಡು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರಂತೆ ನಿರ್ದೇಶಕರು . 
 
ನಾಯಕಿಯರೇ ಇಲ್ಲಿ ಪ್ರಮುಖ ಪಾತ್ರಧಾರಿಗಳು!ವೀರ್‌ ಸಮರ್ಥ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿರಲಿವೆ. ಸೂಫಿಯನ್ನ ಬಳಸಿಕೊಂಡು ಕನ್ನಡದಲ್ಲಿ ಬೇರೆ ರೀತಿಯಲ್ಲೇ ಸಂಗೀತ ಕೊಡುವ ಪ್ರಯತ್ನ ನಡೆಯುತ್ತಿದೆ. ಹಿಂದೂಸ್ತಾನಿ, ವೆಸ್ಟ್ರನ್‌ ಮಿಕ್ಸ್‌ ಮಾಡಿ ನ್ಯೂ ಫ್ಲೇವರ್‌ ಕೊಡುತ್ತಿದ್ದಾರೆ ನಿರ್ದೇಶಕರು . ಜೂನ್‌ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಚಿತ್ರೀಕರಣ ನಡೆಯಲಿದ್ದು, ಮೊದಲ ಹಂತದಲ್ಲಿ ಗೋವಾದಲ್ಲೇ 'ಗುಲಾಬಿ ಸ್ಟ್ರೀಟ್‌' ಹುಡುಗಿಯರು ನಳನಳಿಸುತ್ತಾರಂತೆ  
 

Share this Story:

Follow Webdunia kannada