Select Your Language

Notifications

webdunia
webdunia
webdunia
webdunia

ಕರೀನಾ ಕಪೂರ್‌ ನಿಮಗೆ ನೀಡುವ ಗುಡ್ ನ್ಯೂಸ್?

ಕರೀನಾ ಕಪೂರ್‌ ನಿಮಗೆ ನೀಡುವ ಗುಡ್ ನ್ಯೂಸ್?
ಮುಂಬೈ , ಶುಕ್ರವಾರ, 1 ಜುಲೈ 2016 (13:18 IST)
ಕರೀನಾ ಕಪೂರ್ ತಾಯಿ ಆಗ್ತಾಳೆ. ಆಕೆ ಗರ್ಭಿಣಿ ಎಂದು ಎಲ್ಲೆಡೆ ಸುದ್ದಿ ಹರಡಿತ್ತು. ಇವೆಲ್ಲಾ ಹಳೇ ವಿಚಾರ. ಪಕ್ಕಾ ಗೃಹಿಣಿ ಪಾತ್ರದಲ್ಲಿ ಕೀ ಆಂಡ್ ಕಾ ಚಿತ್ರದಲ್ಲಿ ಮಿಂಚಿದ್ದ ನಟಿ ಬೆಬೋ, ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕರೀನಾ ಕಪೂರ್ ಗುಡ್ ನ್ಯೂಸ್ ನೀಡಿದ್ದಾಳೆ. ಮುಂದಿನ ತಿಂಗಳಿಂದ ಆಕೆಯ ಕಾಲೆಂಡರ್‌ ಫುಲ್ ಆಗಲಿದೆ. ಅಷ್ಟಕ್ಕೂ ಕರೀನಾ ಕಪೂರ್ ಮಾಡುತ್ತಿರುವುದೇನು ಅಂತ ಯೋಚನೆ ಮಾಡುತ್ತಿದ್ದಾರಾ? ಈ ಕುರಿತು ವರದಿ ಇಲ್ಲಿದೆ. 


ಯೆಸ್, ಬೆಬೋ ಮುಂದಿನ ತಿಂಗಳಿಂದ 11 ಮ್ಯಾಗಜೀನ್‌ಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಪ್ರತಿಯೊಂದು ಫ್ಯಾಶನ್ ಮ್ಯಾಗಜೀನ್‌ ಕರೀನಾ ಕಪೂರ್‌ಗೆ ಆಫರ್ ನೀಡಿದೆಯಂತೆ. ಅದರಂತೆ ಆಕೆ 11 ಮ್ಯಾಗಜೀನ್ ಫೊಟೋಶೂಟ್‌ನಲ್ಲಿ ಬ್ಯೂಸಿ ಇರಲಿದ್ದಾರೆ ಎನ್ನಲಾಗುತ್ತಿದೆ. 
 
ಇನ್ನೂ ಅಗಸ್ಟ್‌ನಲ್ಲಿ ಕರೀನಾ ವೀರ್ ದಿ ಶಾದಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾಳೆ. ಅದಲ್ಲದೇ ಯಾವಾಗ ಕರೀನಾ ತಾಯಿಯಾಗಲಿದ್ದಾಳೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

ಕರೀನಾ ಖಾನ್ ಕಪೂರ್ ಸೋನಂ ಕಪೂರ್ ವಿರ್ ದಿ ಶಾಧಿ ಚಿತ್ರದಲ್ಲಿ ಬಿಗ್ ಆಫರ್ ಪಡೆದುಕೊಂಡಿದ್ದಾರೆ. ಯೆಸ್ ಕರೀನಾ ಕಪೂರ್ ಸೋನಮ್ ಕಪೂರ್ ಜತೆಯಾಗಿ ನಟಿಸಲಿದ್ದಾರೆ.  ಆದ್ರೆ ಕರೀನಾ ಮಾತ್ರ ಈ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 
'ವೀರ್ ದಿ ಶಾದಿ' ವೆಡ್ಡಿಂಗ್ ನನ್ನ ಮುಂದಿನ ಚಿತ್ರ.. ರಿಹಾ ಕಪೂರ್,ಕರೀನಾ ಕಪೂರ್, ಸ್ವರಾ ಭಾಸ್ಕರ್, ಶಿಖಾ ತಸ್ಲೀನಾ, ಏಕ್ತಾ ಕಪೂರ್, ನ್ಯೂ ಏಜ್ ಫೇಮಿನಿಸ್ ಎಂದು ಸೋನಮ್ ಟ್ವಿಟ್ ಮಾಡಿದ್ದರು. ಇದೇ ಮೊದಲ ಬಾರಿಗೆ ಕರೀನಾ ಕಪೂರ್ ಹಾಗೂ ಸೋನಮ್ ಕಪೂರ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ವಿಶೇಷ,.ಇನ್ನೂ ಸೋನಮ್ ಸ್ವರಾ ಭಾಸ್ಕರ್ ಜತೆಗೆ ಪ್ರೇಮ್ ರತನ್ ಧನ್ ಪಾವೋ ಹಾಗೂ ರಂಜಾನಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಅತ್ಯಾಚಾರ ಹೇಳಿಕೆ ನೀಡಿಲ್ಲ: ರಾಕಿ ಸಾವಂತ್ ಬಾಂಬ್