ರಿತೇಶ್ ಕೊಟ್ಟ ಗುಲಾಬಿ ಹೂವನ್ನು ಈಗಲೇ ಜೋಪಾನವಾಗಿಟ್ಟಿರುವ ಜೆನಿಲಿಯಾ

Krishnaveni K
ಬುಧವಾರ, 14 ಫೆಬ್ರವರಿ 2024 (08:45 IST)
ಮುಂಬೈ: ಇಂದು ವಿಶ್ವದಾದ್ಯಂತ ವಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದೆ. ನಮ್ಮ ಸಿನಿಮಾ ರಂಗದಲ್ಲಿ ಎಷ್ಟೋ ಮಂದಿ ರೀಲ್ ನಿಂದ ರಿಯಲ್ ಲೈಫ್ ನಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಿದ್ದಾರೆ.

ಅವರ ಪೈಕಿ ಬಾಲಿವುಡ್ ನ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಡಿ ಸೋಜಾ ಕೂಡಾ ಒಬ್ಬರು. ರಿತೇಶ್ ಬಾಲಿವುಡ್ ನಲ್ಲಿ ಜನಪ್ರಿಯರಾಗಿದ್ದರೆ, ಜೆನಿಲಿಯಾ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇಬ್ಬರೂ ಹಿಂದಿಯಲ್ಲಿ ಒಟ್ಟಿಗೇ ಸಿನಿಮಾ ಮಾಡಿದ ಮೇಲೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

ಜೆನಿಲಿಯಾರನ್ನು ರಿತೇಶ್ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಿ ಮದುವೆಯಾಗಿದ್ದರು. ವಿಶೇಷವೆಂದರೆ ಈ ಜೋಡಿ ಈಗಲೂ ಅನ್ಯೋನ್ಯವಾಗಿ ಖುಷಿಯಾಗಿ ಜೊತೆಯಾಗಿದ್ದಾರೆ. ಬಾಲಿವುಡ್ ಜೋಡಿಗಳು ಮದುವೆಯಾಗಿ ನಾಲ್ಕು ದಿನಕ್ಕೆ ಬೇರೆಯಾದ ಎಷ್ಟೋ ಉದಾಹರಣೆಗಳಿವೆ ಆದರೆ ಈ ಜೋಡಿ ಮಾತ್ರ ಮಾಡೆಲ್ ಕಪಲ್ ಎನ್ನುವ ರೀತಿ ಬದುಕುತ್ತಿದ್ದಾರೆ. ಇಬ್ಬರ ಪ್ರೀತಿಯ ಫಲವಾಗಿ ಇಬ್ಬರು ಮಕ್ಕಳೂ ಇದ್ದಾರೆ.

ಪ್ರಪೋಸ್ ಮಾಡಿದ ಗುಲಾಬಿ ಈಗಲೂ ಇಟ್ಟುಕೊಂಡಿರುವ ಜೆನಿಲಿಯಾ
ವಿಶೇಷವೆಂದರೆ ರಿತೇಶ್ ಮೊದಲ ಬಾರಿಗೆ ಜೆನಿಲಿಯಾಗೆ ಪ್ರಪೋಸ್ ಮಾಡುವಾಗ ನೀಡಿದ್ದ ಗುಲಾಬಿಯನ್ನು ಅವರು ಈಗಲೂ ಕಾಪಾಡಿಕೊಂಡಿದ್ದಾರಂತೆ. ಅದು ಬಾಡಿ, ಒಣಗಿ ಹೋಗಿದ್ದರೂ ಅದನ್ನು ಇನ್ನೂ ತಮ್ಮ ಬಳಿಯೇ ಇಟ್ಟುಕೊಂಡಿರುವುದಾಗಿ ಜೆನಿಲಿಯಾ ಹೇಳಿಕೊಂಡಿದ್ದರು.  ಇದು ಇಬ್ಬರ ನಡುವಿನ ನಿಜವಾದ ಪ್ರೀತಿಗೆ ಸಾಕ್ಷಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಮುಂದಿನ ಸುದ್ದಿ
Show comments