Select Your Language

Notifications

webdunia
webdunia
webdunia
webdunia

ಶವವಾಗಿ ಪತ್ತೆಯಾದ ಚಿತ್ರನಟಿ

ಶವವಾಗಿ ಪತ್ತೆಯಾದ ಚಿತ್ರನಟಿ
ಚೆನ್ನೈ , ಶನಿವಾರ, 12 ನವೆಂಬರ್ 2016 (07:11 IST)
ತಮಿಳು ಚಲನಚಿತ್ರ ಮತ್ತು ಕಿರುತೆರೆ ನಟಿ ಸುಪರ್ಣಾ ಆನಂದ್ (29) ಚೆನ್ನೈನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಅವರ ಮನೆ ಲಾಕ್ ಆಗಿತ್ತು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶುಕ್ರವಾರ ಅವರ ಮನೆಗೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಒಳ ಹೋದಾಗ ಸುಪರ್ಣಾ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂತು. 
 
ಸ್ಥಳದಿಂದ ಸುಸೈಡ್ ನೋಟ್ ವಶಪಡಿಸಿಕೊಂಡಿರುವ ಪೊಲೀಸರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
 
ಕಿರುತೆರೆ ನಿರೂಪಕಿಯಾಗಿ ವೃತ್ತಿಜೀವನವನ್ನು ಆರಂಭಿಸಿದ್ದ ಸುಪರ್ಣಾ ಹಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಳು. ಅಷ್ಟೇ ಅಲ್ಲದೆ ಕೆಲ ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಳು.
 
ಇದೇ ವರ್ಷದ ಆರಂಭದಲ್ಲಿ ಕಿರುತೆರೆ ನಟ ಸಾಯಿ ಪ್ರಶಾಂತ್ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹವೇ ಆತನ ಸಾವಿಗೆ ಕಾರಣ ಎಂದು ಬಗೆಯಲಾಗಿತ್ತು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ನಟನಿಗೆ ಅಮಿತಾಭ್ ಬಚ್ಚನ್ ಶುಭಾಶಯ