Select Your Language

Notifications

webdunia
webdunia
webdunia
webdunia

ಕಲಾತ್ಮಕ, ಕಮರ್ಷಿಯಲ್... ಎರಡಕ್ಕೂ ಸೈ- ತಬೂ

ಕಲಾತ್ಮಕ, ಕಮರ್ಷಿಯಲ್... ಎರಡಕ್ಕೂ ಸೈ- ತಬೂ
ಚೆನ್ನೈ , ಶುಕ್ರವಾರ, 21 ನವೆಂಬರ್ 2014 (16:41 IST)
ತಬಾಸುಮ್ ಫಾತಿಮಾ ಅಶ್ಮಿ ಎಂದು ಹೇಳಿದರೆ ಯಾರೆಂದು ಗೊತ್ತಗಾವುದಿಲ್ಲ. ತಬೂ ಎನ್ನಿ ತಿಳಿದೇ ಬಿಟ್ಟಿತು. ಬಾಲಿವುಡ್‌ನಲ್ಲಿ ಕಾಣ ಸಿಗುವ ಅಪೂರ್ವ ನಟಿಯರಲ್ಲಿ ತಬೂ ಮುಖ್ಯವಾಗುತ್ತಾರೆ. ಆರ್ಟ್ ಮತ್ತು ಕಮರ್ಶಿಯಲ್ ಸಿನೆಮಾ ಎರಡನ್ನೂ ಯಾವುದೇ ಗೊಂದಲವಿಲ್ಲದೆ ಸಮನಾಗಿ ತೂಗಿಸಿಕೊಂಡು ಹೋಗುವುದರಲ್ಲಿ ನಿಸ್ಸೀಮರು. ನಿರಂತರತೆ ಕಾಪಾಡಿಕೊಂಡು ಬಂದಿರುವ ಅವರು ಹಲವು ಸಿನೆಮಾಗಳಲ್ಲಿ ಕಲಾ ಪ್ರದರ್ಶನ ಮಾಡಿದ್ದಾರೆ.  
 
ತನ್ನ ಹಿರಿಯ ಸಹೋದರಿ ಫರಾ ಅವರನ್ನು ಅನುಸರಿಸಿದ ತಬೂ ಸಿನೆಮಾ ಎಂಬ ಮುಖ್ಯವಾಹಿನಿಯಲ್ಲಿ ನೆಲೆಯಾಗಿಯೇಬಿಟ್ಟರು. 1985 ದೇವ್ ಆನಂದ್‌ ಅವರ 'ಹಮ್ ನವ್ ಜವಾನ್' ಎನ್ನುವ ಚಿತ್ರದ ಮೂಲಕ ಚಲನಚಿತ್ರವಾಹಿನಿಯಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.
 
ಬಳಿಕ ಸ್ಪಷ್ಟವಾಗಿ ಕಾಣಿಸಿಕೊಂಡದ್ದು, 1994 ರಲ್ಲಿ ಬಿಡುಗಡೆಯಾದ 'ವಿಜಯಪಥ್' ಚಿತ್ರದಲ್ಲಿ. ಅದರ ರುಕ್ ರುಕ್ ರುಕ್ ಹಾಡು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿದೆ. 1995 ರಲ್ಲಿ ಸಂಜಯ್ ಕಪೂರ್ ಜೊತೆಯಲ್ಲಿ ಅವರು 'ಪ್ರೇಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 
 
1996 ತಬೂರ ಅಮೂಲ್ಯ ವರ್ಷ, ಈ  ವರ್ಷ ಬಿಡುಗಡೆಯಾದ ಗುಲ್ಜಾರ್ ಅವರ 'ಮಾಚೀಸ್' ಮತ್ತು ಧವನ್ ಅವರ 'ಸಾಜನ್ ಚಲೇ ಸಸುರಾಲ್' ಎಂಬ ಚಿತ್ರದಲ್ಲಿ ಅಮೂಲ್ಯ ಅಭಿನಯವನ್ನು ನೀಡಿದ್ದರು. ಆ  ಎರಡು ಚಿತ್ರಗಳು ತಬೂ ನಡೆದ ದಾರಿಯನ್ನು ಗುರುತಿಸುತ್ತಿತ್ತು,
 
ಬಳಿಕ ಅವರು ಕಪ್ಲಾನಾ ಲಜ್ಮಿ ಅವರ 'ಧರ್ಮಿಯಾನ್' ಮತ್ತು ಜೆಪಿ ದತ್ತ್ ಅವರ  'ಬಾರ್ಡರ್' ಚಿತ್ರದಲ್ಲೂ 1997ರಲ್ಲಿ ಕಮಲ್ ಹಾಸನ್ ಅವರ 'ಚಾಚಿ 420' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
 
ಅದೇ ವರ್ಷದಲ್ಲಿ ಅವರು ಪ್ರಿಯದರ್ಶನ್ ಅವರ ವಿರಾಸತ್ ಎಂಬ  ಸಿನೆಮಾದಲ್ಲಿ ನಟಿಸಿದ್ದರು. ಬಳಿಕ 'ಹೂ..ತೂ.. ತೂ..' ಮತ್ತು 'ಬೀವಿ ನಂ1' ಎಂಬ ಸಿನೆಮಾದ ಮೂಲಕ ಕ್ರಾಂತಿಕಾರಿ ಹುಡುಗಿಯ ಪಾತ್ರದಲ್ಲೂ ಮಿಂಚಿದ್ದರು. ಅದೇ ರೀತಿ ಗ್ಯಾಂಗ್‌ಸ್ಟರ್ ಓರ್ವನನ್ನು ಮದುವೆಯಾಗುವ ಪಾತ್ರದ ಮೂಲಕ ತಕ್ಷಕ್ (1999)ನಲ್ಲಿ ಮೆಚ್ಚುಗೆ ಗಳಿಸಿದ್ದರು.
 
ಸಾಜಿದ್ ನಡಿಯಾದ್‌ವಾಲಾರ ಜತೆಗಿನ ವಿವಾಹದ ಕುರಿತ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಏಕಾಂಗಿಯಾಗಿಯೇ ಇರುವುದಾಗಿ ಘೋಷಿಸಿದ್ದರು. ಆಗೊಮ್ಮೆ-ಈಗೊಮ್ಮೆ ಅವರೀಗ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada