Select Your Language

Notifications

webdunia
webdunia
webdunia
webdunia

ಅಪ್ಪನ ಹಾದಿ ಅನುಸರಿಸಿದ ದಿನಕರ್ ತೂಗುದೀಪ್

ಅಪ್ಪನ ಹಾದಿ ಅನುಸರಿಸಿದ ದಿನಕರ್ ತೂಗುದೀಪ್
ಬೆಂಗಳೂರು , ಸೋಮವಾರ, 25 ಜುಲೈ 2016 (09:21 IST)
ದರ್ಶನ್ ತೂಗುದೀಪ್ ಹಾಗೂ ದಿನಕರ್ ತೂಗುದೀಪ್ ಅವರ ತಂದೆ ದಿವಂಗತ ಶ್ರೀನಿವಾಸ್ ತೂಗುದೀಪ್ ಅವರು ಕನ್ನಡ ಹೆಸರಾಂತ ಖಳನಾಯಕರಲ್ಲಿ ಒಬ್ಬರು. ಇವತ್ತಿಗೂ ಕನ್ನಡದ ಅದ್ಭುತ ಖಳನಾಯಕರ ಹೆಸರನ್ನು ಪಟ್ಟಿ ಮಾಡಿದಾಗ ತೂಗುದೀಪ್ ಶ್ರೀನಿವಾಸ್ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತೆ. ಇದೀಗ ಅಪ್ಪನಂತೆ ದಿನಕರ್ ತೂಗುದೀಪ್ ಅವರು ಕೂಡ ವಿಲನ್ ಆಗುತ್ತಿದ್ದಾರೆ.


ನಟ ದರ್ಶನ್ ಈಗಾಗಲೇ ನವಗ್ರಹ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿ ಕೇವಲ ನಾಯಕನ ಪಾತ್ರವಲ್ಲದೇ ನಾನು ಖಳನಾಯಕನಾಗಿಯೂ ಉತ್ತಮವಾಗಿ ಅಭಿನಯಿಸಬಲ್ಲೆ ಅನ್ನೋದನ್ನು ತೋರಿಸಿಕೊಟಿದ್ದಾರೆ.

ಇಷ್ಟು ದಿನ ನಿರ್ದೇಶನ ನಿರ್ಮಾಣ ಅಂತಾ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ದರ್ಶನ್ ಸಹೋದರ ದಿನಕರ್ ಇದೀಗ ತಾನು ಅಭಿನಯದತ್ತ ವಾಲಿದ್ದಾರೆ.ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿ ದಿನಕರ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ ಕಳೆದೊಂದು ವಾರದಿಂದ ಹೈದ್ರಾಬಾದ್‍ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.ಇನ್ನು ದರ್ಶನ್ ಕುಟುಂಬದ ಇನ್ನೊಬ್ಬರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ದರ್ಶನ್ ಅವರ ಸಹೋದರಿ ದಿವ್ಯಾ ಅವರ ಪುತ್ರ ಮನೋಜ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ವಿಲನ್ ಗೆಟಪ್ ನಲ್ಲಿ ದಿನಕರ್ ಅವರು ಪಕ್ಕಾ ಅವರ ತಂದೆಯಂತೆಯೇ ಕಾಣುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶರಣ್ ಗಾಗಿ ಹಾಡು ಹಾಡಿದ ಪುನೀತ್ ರಾಜ್ ಕುಮಾರ್