ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಹೊರ ಹಾಕಿದ ಮಾಜಿ ಪೊಲೀಸ್ ಅಧಿಕಾರಿ!

Webdunia
ಬುಧವಾರ, 10 ಜುಲೈ 2019 (09:32 IST)
ನವದೆಹಲಿ: ದುಬೈ ಹೋಟೆಲ್ ಕೊಠಡಿಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿಯದ್ದು ಕೊಲೆಯಾಗಿತ್ತು ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.


ಕೇರಳದ ಜೈಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಾಗಿರುವ ರಿಷಿರಾಜ್ ಸಿಂಗ್ ಈ ಬಾಂಬ್ ಸಿಡಿಸಿದ್ದಾರೆ. ದುಬೈ ಹೋಟೆಲ್ ನಲ್ಲಿ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಶ್ರೀದೇವಿ ಸಾವನ್ನಪ್ಪಿದ್ದರು ಎಂದು ಅಂದು ಮರಣೋತ್ತರ ಪರೀಕ್ಷೆಯಲ್ಲೂ ಹೇಳಲಾಗಿತ್ತು. ಆಗ ಇದು ಕೊಲೆಯಾಗಿರಬಹುದೇ ಎಂಬ ಅನುಮಾನಗಳನ್ನೆಲ್ಲಾ ಅವರ ಕುಟುಂಬ ಸದಸ್ಯರೇ ತಳ್ಳಿ ಹಾಕಿದ್ದರು.

ಆದರೆ ಇದೀಗ ಮಾಜಿ ಡಿಜಿಪಿ ರಿಷಿರಾಜ್ ಸಿಂಗ್ ಫೊರೆನ್ಸಿಕ್ ತಜ್ಞನಾಗಿ ಹಲವು ಪ್ರಕರಣಗಳನ್ನು ಬೇಧಿಸಿದ ತಮ್ಮ ಸ್ನೇಹಿತ ಡಾ. ಉಮಾದಾತನ್ ಅವರ ಅನುಮಾನದ ಪ್ರಕಾರ ಈ ಆರೋಪ ಮಾಡಿದ್ದಾರೆ. ಉಮಾದಾತನ್ ಪ್ರಕಾರ ಇದು ಕೊಲೆಯಾಗಿದ್ದಿರಬಹುದು. ಯಾಕೆಂದರೆ ಒಬ್ಬ ವ್ಯಕ್ತಿ ಎಷ್ಟೇ ಮದ್ಯಪಾನ ಮಾಡಿದ್ದರೂ ಒಂದು ಅಡಿ ಆಳದ ನೀರಿಗೆ ಬಿದ್ದು ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಒಂದೋ ಆಕೆಯನ್ನು ಯಾರಾದರೂ ತಳ್ಳಿರಬೇಕು ಎಂದು ಉಮಾದಾತನ್ ಅಭಿಪ್ರಾಯಪಟ್ಟಿರುವುದಾಗಿ ರಿಷಿರಾಜ್ ಸಿಂಗ್ ಹೇಳಿದ್ದಾರೆ. ಸ್ನೇಹಿತನ ಸಾಕ್ಷ್ಯಗಳ ಪ್ರಕಾರ ರಿಷಿರಾಜ್ ಸಿಂಗ್ ಕೇರಳದ ಮಾಧ್ಯಮವೊಂದಕ್ಕೆ ಬರೆದ ಲೇಖನದಲ್ಲಿ ಈ ವಾದ ಮಂಡಿಸಿದ್ದಾರೆ. ರಿಷಿರಾಜ್ ಸಿಂಗ್ ರ ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮುಂದಿನ ಸುದ್ದಿ
Show comments