Select Your Language

Notifications

webdunia
webdunia
webdunia
webdunia

ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ ಇಮ್ರಾನ ಹಶ್ಮಿ

ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ ಇಮ್ರಾನ ಹಶ್ಮಿ
ಮುಂಬೈ , ಮಂಗಳವಾರ, 17 ಮೇ 2016 (17:14 IST)
'ಅಜರ್' ಚಿತ್ರದ ಬಳಿಕ ಇಮ್ರಾನ್ ಹಶ್ಮಿ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್- 4 ಚಿತ್ರದಲ್ಲಿ ಎಂಟ್ರಿ ನೀಡಲಿದ್ದಾರೆ... ಈ ಚಿತ್ರದಲ್ಲಿ ನಟಿಸಲು ಇಮ್ರಾನ್ ಹಶ್ಮಿಗೆ ಆಫರ್ ಬಂದಿದೆಯಂತೆ. ಆದಷ್ಟು ಶೀರ್ಘದಲ್ಲೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಲಿದೆ.
ಅಂದಹಾಗೆ ಇಮ್ರಾನ್ ಹಶ್ಮಿಗೆ ಆಫರ್‌ಗಳಿಗೇನು ಕಮ್ಮಿ ಇಲ್ಲ. ಕೈಯಲ್ಲಿ ಸಾಕಷ್ಟು ಪ್ರೋಜೆಕ್ಟ್‌ಗಳಿವೆ.. ಸದ್ಯದ ಮಾಹಿತಿ ಪ್ರಕಾರ ಹಶ್ಮಿ ಎರಡು ಚಿತ್ರಗಳಲ್ಲಿ ಬ್ಯೂಸಿ.. ಮುಂಬರುವ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಮ್ರಾನ್ ಹಶ್ಮಿ ಮುಂಬರುವ ಚಿತ್ರ ಗ್ಯಾಂಗ್‌ಸ್ಟಾರ್ ಆಧಾರಿತ ಚಿತ್ರವಾಗಿದ್ರೆ, ಮತ್ತೊಂದು ಮರ್ಡರ್ ಕಥೆಯನ್ನೊಳಗೊಂಡಿದೆ. 
 
ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಇಮ್ರಾನ  ಹಶ್ಮಿ.. ಕೆಲ ಉತ್ತಮ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡುವುದರತ್ತ ಗಮನ ಹರಿಸಿದ್ದಾರಂತೆ. 

ಮಾಜಿ ಕ್ರಿಕೆಟಿಗ ಅಜರುದ್ದೀನ್ ಜೀವನಾಧಾರಿತ ಚಿತ್ರ 'ಅಜರ್' ಚಿತ್ರದಲ್ಲಿ ಪ್ರಾಂಚಿ ದೇಸಾಯಿ, ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. 'ಅಜರ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಏಕ್ತಾ ಕಪೂರ್.
 
ಈಗಾಗಲೇ ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯ ಆಯ್ದ ಭಾಗಗಳನ್ನು ಒಗ್ಗೂಡಿಸಿ ಡರ್ಟಿ ಪಿಕ್ಚರ್ ಚಿತ್ರ ಬಿಡುಗಡೆ ಮಾಡಿದ ಏಕ್ತಾ ಕಪೂರ್ ಈಗ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 'ಏಕ್ ರಿಶ್ತಾ', 'ಶರಾಬಿ' ಚಿತ್ರಗಳ ಸೆಲೆಬ್ರೇಷನ್‌ನಲ್ಲಿ ಬಿಗ್‌ಬಿ