Webdunia - Bharat's app for daily news and videos

Install App

ದ್ವಾರಕೀಶ್ ಸಿನಿಮಾದಲ್ಲಿದ್ದಾರೆ ಐವರು ಛಾಯಾಗ್ರಾಹಕರು

Webdunia
ಶುಕ್ರವಾರ, 29 ಏಪ್ರಿಲ್ 2016 (15:26 IST)
ಒಂದು ಸಿನಿಮಾದಲ್ಲಿ ಮುಖ್ಯವಾಗಿ ಒಬ್ಬರು ಕ್ಯಾಮೆರಾ ಮ್ಯಾನ್ ಇರೋದು ಸಾಮಾನ್ಯ. ಆದ್ರೆ ಒಂದೇ ಸಿನಿಮಾದಲ್ಲಿ ಐವರು ಛಾಯಾಗ್ರಾಹಕರು ಕೆಲಸ ಮಾಡ್ತಾರೆ ಅಂದ್ರೆ ನಂಬೋದಕ್ಕೆ ಕಷ್ಟವಾಗುತ್ತಲ್ವಾ. ನಂಬೋದು ಕಷ್ಟ ಆದ್ರೂ ಇದು ನಿಜ. ದ್ವಾರಕೀಶ್ ಅವರ  ಚೌಕ ಸಿನಿಮಾದಲ್ಲಿ ಐವರು ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಹೆಸರಾಂತ ಛಾಯಾಗ್ರಾಹಕರು ಅಂತಾ ಗುರುತಿಸಿಕೊಂಡಿರುವ ಎಸ್. ಕೃಷ್ಣ, ಸತ್ಯ ಹೆಗಡೆ, ಸುಧಾಕರ್ ರಾಜ್, ಶೇಖರ್ ಚಂದ್ರು ಮತ್ತು ಸಂತೋಷ್ ರೈ ಪಾತಾಜೆ  ಈ ಐವರು ದ್ವಾರಕೀಶ್ ಸಿನಿಮಾದಲ್ಲಿ ಕ್ಯಾಮೆರಾ ಕಣ್ಣಾಗಿದ್ದಾರೆ. 
 
ಇನ್ನು ಇವೆರೆಲ್ಲಾ ಸಿನಿಮಾದ ಒಂದೊಂದು ಎಪಿಸೋಡುಗಳನ್ನು ಚಿತ್ರೀಕರಣ ಮಾಡಲಿದ್ದಾರಂತೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ ಕೇವಲ ಕ್ಯಾಮೆರಾ ಮೆನ್ ಗಳು ಮಾತ್ರವಲ್ಲ ಚಿತ್ರಕ್ಕೆ ಸಂಭಾಷಣೆಕಾರರು, ಕಲಾ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ಸಹ ಐದೈದು ಜನ ಇರುತ್ತಾರಂತೆ. 
 
ಅಂದ್ಹಾಗೆ ಈ ವಿಭಿನ್ನ ಕಥೆಯನ್ನು ನಿರ್ದೇಶನ ಮಾಡುತ್ತಿರೋದು ನಿರ್ದೇಶಕ ತರುಣ್ ಸುಧೀರ್, ಚಿತ್ರದಲ್ಲಿ ನಾಲ್ವರು ನಾಯಕರನ್ನು ತರುಣ್ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಛಾಯಾಗ್ರಹಣ, ಸಂಗೀತ, ಸಂಭಾಷಣೆ, ಕಲಾ ನಿರ್ದೇಶನ ಈ ಎಲ್ಲಾ ವಿಭಾಗಗಳಲ್ಲೂ ಐದೈದು ಜನರನ್ನು ಆಯ್ಕೆ ಮಾಡಿದ್ದಾರೆ. 
 
ಸಿನಿಮಾಕ್ಕೆ  ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಗುರುಕಿರಣ್, ಶ್ರೀಧರ್ ಸಂಭ್ರಮ್ ಮತ್ತು ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.ಇನ್ನು  ಸಂಭಾಷಣೆಯನ್ನು `ಸಿಂಪಲ್' ಸುನಿ, ಅನಿಲ್ ಕುಮಾರ್, ಎ.ಪಿ. ಅರ್ಜುನ್, ಚಿಂತನ್ ಮತ್ತು ಯೋಗಾನಂದ್ ಮುದ್ದಾನ್ ಬರೆಯಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಮುಂದಿನ ಸುದ್ದಿ
Show comments