Webdunia - Bharat's app for daily news and videos

Install App

ಸಿಕ್ಸ್ ಪ್ಯಾಕ್ ಗೆಂದು ಒಂದು ಹನಿ ನೀರನ್ನು ಕುಡಿಯದ ಧನುಶ್..

Webdunia
ಬುಧವಾರ, 16 ಜುಲೈ 2014 (11:38 IST)
ರಜನಿಕಾಂತ್ ಅಳಿಯ ಟಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ಧನುಶ್ ತಮ್ಮ ಚಿತ್ರ ಬದುಕಿನಲ್ಲಿ ಅನೇಕ ಬಗೆಯ ಪ್ರಯೋಗಗಳನ್ನು ಮಾಡುವತ್ತ ಗಮನ ನೆಟ್ಟಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗ ಒಂದು ಬಗೆಯ ಹೊಳಪಿನ ಕ್ಷೇತ್ರ. ಅಲ್ಲಿ ಸಿಗುವ ಪ್ರಚಾರ, ಜನಪ್ರಿಯತೆ, ಹಣ ಎಲ್ಲವು ಸಹ ಜನರನ್ನು ಆಕರ್ಷಿಸುತ್ತದೆ.

ಸುಮ್ಮನೆ ನಟಿಸಿದರೆ ಅವರಿಗೆ ಎಷ್ಟೆಲ್ಲಾ ಹಣ ದೊರಕುತ್ತದೆ   ಎಂದು ಹೇಳುವವರು ಇಲ್ಲದೆ ಇಲ್ಲ. ಆದರೆ ಆ ರೀತಿ  ಸಂಭಾವನೆ ಪಡೆಯುವಾಗ ಮಾಡ ಬೇಕಾದ ಸಾಧನೆ, ಅನುಭವಿಸುವ ಕಷ್ಟಗಳು ...ಬೇಡಾ ವರ್ಣಿಸೋಕೆ ಹೋದರೆ ನಾವೆಷ್ಟು ಸುಖಿಗಳು ಅನ್ನುವುದು ಸತ್ಯ!  

ಸಾಮಾನ್ಯವಾಗಿ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಒಂದಲ್ಲ ಒಂದು ಬಾರಿ ಶರೀರಕ್ಕೆ ಸಿಕ್ಕಾಪಟ್ಟೆ ದಣಿವು ನೀಡುವ ಅದರಲ್ಲೂ ಸಿಕ್ಸ್ ಪ್ಯಾಕ್ ನಂತಹ ಹುಚ್ಚಿಗೆ ಬೀಳುವ  ಹೀರೋಗಳು ಇಲ್ಲದೆ ಇಲ್ಲ. ಅದೇ  ಪಟ್ಟಿಗೆ ತಮಿಳು ಹೀರೋ ಧನುಶ್ ಸಹ ಸೇರ್ಪಡೆ ಆಗುತ್ತಿದ್ದಾರೆ. ತನ್ನ 25ನೇ ಚಿತ್ರ ವೆಲ್ಲಯಿ ಲ್ಲಾ ಪಟ್ಟದರಿ ಯಲ್ಲಿ ಸಿಕ್ಸ್ ಪ್ಯಾಕ್ ಮುಖಾಂತರ ಅವರ ಅಭಿಮಾನಿಗಳ ಖುಷಿ ಹೆಚ್ಚಿಸಲು ಸಿದ್ಧ ಆಗುತ್ತಿದ್ದಾರೆ ಧನುಶ್! ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸುವ ಸಲುವಾಗಿ ಒಂದು ಹನಿ ನೀರನ್ನು ಸಹ ಸೇವಿಸಿಲ್ಲವಂತೆ ಧನುಶ್ ಎರಡು ದಿನಗಳ ಕಾಲ.

ತನ್ನ 25 ನೇ ಚಿತ್ರದಲ್ಲಿ ಭಿನ್ನವಾಗಿ ಕಾಣುವ ಸಲುವಾಗಿ ಇಷ್ಟೆಲ್ಲಾ ಮಾಡ್ತಾ ಇದ್ದೀನಿ ಅಷ್ಟೇ ಎನ್ನುವ ಸಮಾಧಾನದ ಉತ್ತರ ಬರುತ್ತದೆ ಧನುಶ್ ಅವರಿಂದ. ಟಾಲಿವುಡ್ ಗೆ ಬಂದ ಆರಂಭಿಕ ದಿನಗಳಲ್ಲಿ ತಾನು ಯಾವುದಕ್ಕೂ ಪ್ರಯೋಜನ ಇಲ್ಲದವ ಎಂದು ಕೀಟಲೆ ಮಾಡಿದ್ದರು . ಅವರ ಭಾವನೆಗಳು ಸುಳ್ಳು ಎಂದು ತೋರಿಸುವ ಸಲುವಾಗಿ ಚಿತ್ರಗಳಲ್ಲಿ ಅಗತ್ಯ ಇರುವಂತಹ ಪ್ರಯತ್ನ ಮಾಡಿ ನನಗೊಂದು ಸ್ಥಾನ ಪಡೆಯಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ ಧನುಶ್.
 
ಕೇವಲ ಬ್ಯಾಕ್ ಗ್ರೌಂಡ್ ಇದ್ದಾಗ ಮಾತ್ರ ಯಾವುದೇ ವ್ಯಕ್ತಿ ಹೀರೋ ಆಗೋಕೆ ಸಾಧ್ಯವಿಲ್ಲ ಎನ್ನುವ ವಾಸ್ತವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ ಧನುಶ್. ಬಾಲಿವುಡ್ ನಲ್ಲೂ ಸಹ ಇಂತಹಾದ್ದೆ ಪರಿಸ್ಥಿತಿ ಎದುರಾಯಿತು ಎಂದು ಹೇಳಿದ್ದಾರೆ .  ಅವರ ಅಭಿಮಾನಿಗಳಿಗೆ ಈಗ ಧನುಶ್ ಸಿಕ್ಸ್ ಪ್ಯಾಕ್ ನೋಡುವ ಖುಷಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments