Webdunia - Bharat's app for daily news and videos

Install App

ಬರ ಸಂತ್ರಸ್ತರ ನೋವಿಗೆ ಮಿಡಿಯುತ್ತಿರುವ ರಾಕಿಂಗ್ ಸ್ಟಾರ್

Webdunia
ಶುಕ್ರವಾರ, 6 ಮೇ 2016 (10:43 IST)
ಹೀರೋ ಒಬ್ಬ ಕೇವಲ ತೆರೆ ಮೇಲೆ ಹೀರೋ ಆದ್ರೆ ಸಾಲದು ಆತ ನಿಜಜೀವನದಲ್ಲೂ ಅದೇ ರೀತಿ ಬದುಕಬೇಕು ಅನ್ನೋದಕ್ಕೆ ಉದಾಹರಣೆ ಸ್ಯಾಂಡಲ್ ವುಡ್ ಹೀರೋ ಯಶ್ ವರು ಉತ್ತಮ ಉದಾಹರಣೆಯ ತೆರೆ ಮೇಲೆ ಕೋಟ್ಯಂತರ ಮಂದಿಯನ್ನು ರಂಜಿಸೋ ಇವರು ನಿಜ ಜೀವನದಲ್ಲಿ ಇಡೀ ಕರ್ನಾಟಕದ ಜನರೇ ಮೆಚ್ಚುವಂತಹ  ಕೆಲಸವನ್ನು ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಉತ್ತರ ಕರ್ನಾಟಕದ 50 ಹಳ್ಳಿಗಳ ಜನರಿಗೆ ರಾಕಿಂಗ್ ಸ್ಟಾರ್ ಕುಡಿಯುವ ನೀರನ್ನು ಒದಗಿಸುವ ಮೂಲಕ ಅಲ್ಲಿನ ಜನರ ದಾಹವನ್ನು ನೀಗಿಸಿದ್ರು. ಇದೀಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಿಗೆ ಗ್ರಾಮದ ಜನರ ನೋವಿಗೂ ಯಶ್ ಸ್ಪಂದಿಸಿದ್ದಾರೆ.
 
ತಮ್ಮ ಯಶೋಮಾರ್ಗ ಫೌಂಡೇಷನ್ ವತಿಯಿಂದ ಟ್ಯಾಂಕರ್ ಮೂಲಕ ಹಂಜಿಗೆ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಯಶ್ ಅವರ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಸುಮಾರು 25 ಹಳ್ಳಿಗಳಿಗೆ ನೀರು ಪೂರೈಸಿರುವ ಯಶ್ ಆ ಮೂಲಕ ನಾನೊಬ್ಬ ಹೀರೋ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
 
ಕೇವಲ ತೆರೆ ಮೇಲೆ ಉತ್ತಮ ಪಾತ್ರಗಳನ್ನು ಮಾಡಿ ರಂಜಿಸೋ ಬದಲು ಇದೇ ರೀತಿ ನಿಜ ಜೀವನದಲ್ಲೂ ಒಂದಷ್ಟು ಮಂದಿಗೆ ನೆರವಾಗುವ ಕೆಲಸವನ್ನು ತಾರೆಯರು ಮಾಡಿದ್ರೆ ಜನ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹಾಕೋದಕ್ಕಿಂತ ಹೆಚ್ಚಿನ ಬೆಂಬಲವನ್ನು ಸಿನಿಮಾತಾರೆಯರಿಗೆ ನೀಡುತ್ತಾರೆ.ಆದ್ರೆ ಇದಕ್ಕೆ ಅವರೆಲ್ಲಾ ಮನಸ್ಸು ಮಾಡಬೇಕು ಅಷ್ಟೇ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

Rakesh Poojari: ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿಗಳು ಟೀಂನಿಂದ ದೊಡ್ಡ ನಿರ್ಧಾರ

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

ಮುಂದಿನ ಸುದ್ದಿ
Show comments