Webdunia - Bharat's app for daily news and videos

Install App

ಮೊದಲ ಬಾರಿಗೆ ಆಕ್ಷನ್ ಸೀನ್ ಗಳನ್ನು ಮಾಡುತ್ತಿರುವ ಶ್ರದ್ಧಾ ಕಪೂರ್

Webdunia
ಸೋಮವಾರ, 30 ನವೆಂಬರ್ 2015 (12:12 IST)
ಬಾಲಿವುಡ್‌ನಲ್ಲಿ ತನ್ನ ಮೊದಲ ಸಿನಿಮಾದ ಮೂಲಕವೇ ಭರವಸೆ ಹುಟ್ಟಿಸಿದ ನಟಿ ಶ್ರದ್ಧಾ ಕಪೂರ್. ಸದ್ಯ ಶ್ರದ್ಧಾ ಕಪೂರ್ ಟೈಗರ್ ಶ್ರಾಫ್ ಜೊತೆ ಭಾಗೀ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಶ್ರದ್ಧಾ.
 
ಇನ್ನು ಆಕ್ಷನ್  ಸೀನ್‌ಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರೋದರಿಂದ ಶ್ರದ್ಧಾ ಅದಕ್ಕಾಗಿ ಕೊಂಚ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈಗಾಗಲೇ ಇದಕ್ಕಾಗಿ ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್. ಐದು ದಿನಗಳ ಕಾಲ ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಶ್ರದ್ಧಾ ಕಪೂರ್ ಕೆಲ ಫೈಟಿಂಗ್ ಕಲೆಗಳನ್ನು ಅಭ್ಯಾಸ ಮಾಡಲಿದ್ದಾರೆ.
 
ಶ್ರದ್ಧಾ ಮುಖ್ಯವಾಗಿ ಕಿಕ್ಕಿಂಗ್, ಪಂಚಿಂಗ್,ಬ್ಲಾಕಿಂಗ್ ಹೀಗೆ ಸಿನಿಮಾಕ್ಕೆ ಬೇಕಾದ ಆದ ಅಗತ್ಯ ಕಲೆಗಳನ್ನು ರೂಢಿಸಿಕೊಳ್ಳುತ್ತಿದ್ದಾರಂತೆ. ಇನ್ನು ಹೊಸ ವಿದ್ಯೆ ಕಲಿಯುತ್ತಿರೋದು ಶ್ರದ್ಧಾಗೆ ತುಂಬಾನೇ ಖುಷಿ ಕೊಡುತ್ತಿದೆಯಂತೆ.ಈ ಹಿಂದೆ ಏಕ್ ವಿಲನ್ ಸಿನಿಮಾಗಾಗಿ ಶ್ರದ್ಧಾ ಬೈಕ್ ರೈಡಿಂಗ್ ಕಲಿತ್ತಿದ್ದರು. ಎಬಿಸಿಡಿ-2 ಗಾಗಿ ವಿವಿಧ ರೀತಿಯ ಡ್ಯಾನ್ಸ್ ಗಳನ್ನು ಕಲಿತಿದ್ದರು. ಇನ್ನು ಮುಂದಿನ ಸಿನಿಮಾ ರಾಕ್ ಆನ್ 2 ಗಾಗಿ ಪಿಯಾನೋ ಕಲಿಯಲಿದ್ದಾರೆ ಶ್ರದ್ಧಾ. ಇದನ್ನೆಲ್ಲಾ ನೋಡುತ್ತಿದ್ರೆ ಶ್ರದ್ಧಾ ಒಂದೊಂದು ಸಿನಿಮಾಗಾಗಿ ಒಂದೊಂದು ವಿದ್ಯೆ ಕಲಿಯೋದಂತು ಕನ್ಫರ್ಮ್ ಆಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments