Select Your Language

Notifications

webdunia
webdunia
webdunia
webdunia

ಸಲ್ಮಾನ್ ತಾಯಿಯ ಜತೆಯಾಗಿ ಬಂದ ಲೂಲಿಯಾ ವೆಂಟೂರ್, ಲೂಲಿಯಾ-ಸಲ್ಲು ಮದುವೆ ಖಚಿತ?

ಸಲ್ಮಾನ್ ತಾಯಿಯ ಜತೆಯಾಗಿ ಬಂದ ಲೂಲಿಯಾ ವೆಂಟೂರ್, ಲೂಲಿಯಾ-ಸಲ್ಲು ಮದುವೆ ಖಚಿತ?
ಮುಂಬೈ , ಗುರುವಾರ, 12 ಮೇ 2016 (11:37 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಇವತ್ತು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ್ರು. ಈ ವೇಳೆ ಸಲ್ಮಾನ್ ಅಮ್ಮ ಹಾಗೂ ಲೂಲಿಯಾ ವೆಂಟೂರ್ ಕೂಡ ಜತೆಗಿದ್ರು. ಇನ್ನೂ ಅಚ್ಚರಿಯೆಂದರೆ ಲೂಲಿಯಾ ಸಲ್ಮಾನ್ ಅಮ್ಮನ ಕೈ ಕೈ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂತು.
ಯೆಸ್, ಸಲ್ಮಾನ್ ಖಾನ್ ಜತೆ ಇವತ್ತು ಲೂಲಿಯಾ ವೆಂಟೂರ್ ಜತೆಯಾಗಿ ಕಾಣಿಸಿಕೊಂಡ್ರು... ಸಲ್ಮಾನ್ ಇದೇ ವರ್ಷದಂದು ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿದೆ. ಅಂತೂ ಇಂತು ಸಲ್ಮಾನ್ ಜತೆ ಸಪ್ತಪತಿ ತುಳಿಯೋ ಆ ಹುಡುಗಿ ಯಾರು ಎಂಬುವುದಕ್ಕೆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದಂತಾಗಿದೆ. ಈ ದೃಶ್ಯವನ್ನು ನೋಡಿದ್ರೆ ಸಲ್ಮಾನ್ ಖಾನ್ ಲೂಲಿಯಾರನ್ನೇ ಮದುವೆಯಾಗಲಿದ್ದಾರೆ ಎಂದು ಖಚಿತವಾದಂತಾಗಿದೆ. 
 
ಅಲ್ಲದೇ ಸಲ್ಮಾನ್ ಖಾನ್ ಇದೀಗ ಎಲ್ಲಾ ರೂಮರ್ಸ್‌ಗೂ ತೆರೆ ಬಿದ್ದಂತಾಗಿದೆ.ಲೂಲಿಯಾ ಇತ್ತೀಚೆಗೆ ಸಲ್ಮಾನ್ ಖಾನ್, ಹಾಗೂ ಸಲ್ಮಾ ಖಾನ್ ಜತೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾನಿಯನ್ ಬ್ಯೂಟಿ ಜತೆ ಸಲ್ಮಾನ್ ಖಾನ್ ಮದುವೆಯಾಗ್ತಾರಾ? ಎಂಬ ಮಿಲಿಯನ್‌ರ ಪ್ರಶ್ನೆಗೆ ಅಂತು ತೆರೆ ಬಿದ್ದಂತಾಗಿದೆ. 

ಆದರೆ ಸಲ್ಮಾನ್ ಪ್ರೋಫೆಶನಲ್ ಜೀವನ ನೋಡಿದ್ರೆ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ... ಇನ್ನೂ ಸಲ್ಮಾನ್ ಮುಂಬರುವ ಚಿತ್ರ  ಸುಲ್ತಾನ್ ತೆರೆಗೆ ಬರಲು ಸಜ್ಜಾಗಿದೆ.

ಇನ್ನೂ ಸಲ್ಲು ಅಭಿನಯದ 'ಸುಲ್ತಾನ್' ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆದಿದ್ದಾರೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಐಶ್ವರ್ಯ ರೈ