Select Your Language

Notifications

webdunia
webdunia
webdunia
webdunia

ದೀಪಿಕಾ ಈಗ ಅವಳ ಜೀವನದ ಅತ್ಯಂತ ಖುಷಿ ಕ್ಷಣಗಳಲ್ಲಿದ್ದಾಳೆ- ರಣ್ ವೀರ್ ಸಿಂಗ್

ದೀಪಿಕಾ ಈಗ ಅವಳ ಜೀವನದ ಅತ್ಯಂತ ಖುಷಿ ಕ್ಷಣಗಳಲ್ಲಿದ್ದಾಳೆ- ರಣ್ ವೀರ್ ಸಿಂಗ್
, ಮಂಗಳವಾರ, 9 ಫೆಬ್ರವರಿ 2016 (11:22 IST)
ನಟಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಅಭಿನಯಿಸುತ್ತಿದ್ದಾರೆ. ದೀಪಿಕಾ ವೃತ್ತಿ ಬದುಕಿನಲ್ಲಿ ಈಗ ಯಶಸ್ಸಿನ ಹಾದಿಯಲ್ಲಿದ್ದಾರೆ. ಜೊತೆಗೆ ವೈಯುಕ್ತಿಕ ಜೀವನದಲ್ಲೂ ಅವರು ಹ್ಯಾಪಿಯಾಗಿದ್ದಾರೆ. ಹಾಗಾಗಿ ಅವರಿಗೆ ಸದ್ಯದ ದಿನಗಳು ಅತ್ಯಂತ ಖುಷಿಯ ದಿನಗಳು ಅಂತಾ ನಟ ರಣ್ ವೀರ್ ಸಿಂಗ್ ಹೇಳಿದ್ದಾರೆ.

 
ನಾವು ಸದ್ಯ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ನೋಡಿದ್ರೆ ನಮಗೆ ದೀಪಿಕಾ ಅವರು ಎಷ್ಟು ಖುಷಿಯಾಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅದು ಅರ ಮುಖದಲ್ಲೇ ಕಾಣ್ತಿದೆ.ಅಲ್ದೇ ಸದ್ಯ ಅವರು ಟೋರೊಂಟೋದಲ್ಲಿದ್ದಾರೆ. ಅವರ ಫೋಟೋಗಳನ್ನು ನೋಡುತ್ತಿದ್ರೆ ಹೊಸ ಅನುಭವಗಳನ್ನು ಪಡೆಯುತ್ತಿರೋ ಸಂತೋಷ ಎದ್ದು ಕಾಣ್ತಿದೆ. ಅಲ್ಲದೇ ಸದ್ಯ ಅವರಿಗೆ ಅಲ್ಲಿ ಎಲ್ಲಾ ಹೊಸ ಹೊಸ ವ್ಯಕ್ತಿಗಳ ಪರಿಚಯವಾಗ್ತಿರೋದರಿಂದ ಅವರಲ್ಲಿ ಸಂತಸವಿದೆ.
 
ದೀಪಿಕಾ ಸದ್ಯ ಬಾಲಿವುಡ್ ಅಂಗಳದ ಯಶಸ್ವಿ ನಟಿಯರಲ್ಲಿ ಒಬ್ಬರು. 2015 ಅಂತೂ ದಿಪ್ಪಿ ಪಾಲಿಗೆ ಮರೆಯಲಾರದ ವರ್ಷ. ಅವರು ಮಾಡಿದ ಸಿನಿಮಾಗಳೆಲ್ಲಾ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಇನ್ನು ಈ ವರ್ಷ ಆರಂಭದಲ್ಲೇ ಅವರಿಗ ಹಾಲಿವುಡ್ ಸಿನಿಮಾದಿಂದ ಆಫರ್ ಬಂದು ಅವರು ಅಭಿನಯಿಸುತ್ತಿದ್ದಾರೆ. ಹಾಗಾಗಿ ಈ ವರ್ಷ ಕೂಡ ದಿಪ್ಪಿಗೆ ಸಾಕಷ್ಟು ನಿರೀಕ್ಷೆಗಳಿವೆ.

Share this Story:

Follow Webdunia kannada