Webdunia - Bharat's app for daily news and videos

Install App

ಶಿವಕುಮಾರ್ ಸ್ವಾಮೀಜಿಗಳಿಂದ 'ದೊಡ್ಮನೆ ಹುಡುಗ' ಆಡಿಯೋ ರಿಲೀಸ್

Webdunia
ಮಂಗಳವಾರ, 16 ಆಗಸ್ಟ್ 2016 (09:43 IST)
ಪವರ್ ಸ್ಟಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಆಡಿಯೋ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬಿಡುಗಡೆ ಮಾಡಲಾಯ್ತು. ಕರ್ನಾಟಕ ರತ್ನ, ತ್ರಿವಿಧ ದಾಸೋಯಿ ಶ್ರೀ ಶಿವಕುಮಾರ್ ಸ್ವಾಮೀಜಿ ಆಗಮಿಸುತ್ತಿದ್ದಂತೆ ಸಾಮೂಹಿಕವಾಗಿ ಪಾದಪೂಜೆ ನೆರವೇರಿತು. ಬಳಿಕ ಶ್ರೀಗಳ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. 


ಮಠದ ಆವರಣದಲ್ಲಿರುವ ಸಿದ್ಧಲಿಂಗೇಶ್ವರ ವೇದ-ಸಂಸ್ಕೃತ ಮಹಾ ಪಾಠಶಾಲೆಯ ಮುಂಭಾಗದಲ್ಲಿ ಹಾಕಿದ್ದ ಸರಳ ವೇದಿಕೆಯಲ್ಲಿ ಸಿದ್ಧಗಂಗಾ ಶ್ರೀಗಳು ಆಡಿಯೋವನ್ನು ರಿಲೀಸ್ ಮಾಡಿದರು.

ಈ ವೇಳೆ ಮಾತನಾಡಿದ ಪುನೀತ್, ಇದು ನಡೆದಾಡುವ ದೇವರಿರುವ ಮಠ.. ನಾನು 6 ವರ್ಷದ ಚಿಕ್ಕವನಿರುವಾಗ ನಮ್ಮ ತಂದೆ ಮಠಕ್ಕೆ ಕರೆತಂದಿದ್ದರು ಹಾಗೂ ಆಶೀವಾರ್ದ ಮಾಡಿಸಿದ್ದರು. ಅಂದಿನಿಂದಲೂ ಮಠದ ಮೇಲೆ ಅಪಾರ ಭಕ್ತಿ ಇದೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ. 
 
ಮಠದ ದಾಸೋಹಕ್ಕಾಗಿ ಪುನೀತ್ ರಾಜಕುಮಾರ್ 2 ಲಕ್ಷ ಹಾಗೂ ದೊಡ್ಮನೆ ಹುಡುಗ ನಿರ್ಮಾಪಕ ಗೋವಿಂದರಾಜು ಮಠದ ದಾಸೋಹಕ್ಕೆ 5 ಲಕ್ಷ ನೀಡಿದರು. ಮೃತ ಯೋಧರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಮೃತ ಡಿ.ಕೆ ರವಿ ತಾಯಿ ಗೌರಮ್ಮ ಅವರನ್ನು ಗೌರವಿಸಲಾಯಿತು.
 
ಆಡಿಯೋ ಬಿಡುಗಡೆ ಸಮಾರಂಭದಲ್ಲಿ  ಹಿರಿಯ ನಟ ಅಂಬರೀಷ್, ನಟಿ ಭಾರತಿ ವಿಷ್ಣುವರ್ಧನ ಅವರನ್ನು ಗೌರವಿಸಲಾಯ್ತು. ನಟ ರವಿಶಂಕರ್, ನಟಿ ಭಾರತಿ ವಿಷ್ಣುವರ್ಧನ, ನಿರ್ದೇಶಕ ಯೋಗರಾಜ್ ಭಟ್, ದೊಡ್ಮನೆ ಚಿತ್ರದ ನಿರ್ದೇಶಕ ಸೂರಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments