Webdunia - Bharat's app for daily news and videos

Install App

ಬಿಕಿನಿಯಲ್ಲಿ ವಿಟಮಿನ್ ’ಸಿ’ಗಾಗಿ ದಿಶಾ ಪಟಾನಿ ಹಾಟ್ ದೃಶ್ಯ

Webdunia
ಬುಧವಾರ, 30 ನವೆಂಬರ್ 2016 (08:25 IST)
ಪುರಿ ಜಗನ್ನಾಥ್ ನಿರ್ದೇಶನದ ಟಾಲಿವುಡ್‌ನ ’ಲೋಫರ್’ ಚಿತ್ರದಲ್ಲಿ ಬಣ್ಣದ ಹಚ್ಚುವ ಮೂಲಕ ಈ ಬೆಡಗಿ ದಕ್ಷಿಣ ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು. ಆಮೇಲೆ ದಕ್ಷಿಣದಲ್ಲಿ ಅವಕಾಶಗಳಿಲ್ಲದೆ ಈಗ ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ಅಲ್ಲೂ ಒಂದಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾಯ್ತು. 
 
ಬಾಲಿವುಡ್‌ನ ’ಬೆಫಿಕ್ರಾ’ ಚಿತ್ರದಲ್ಲಿ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ಜೊತೆ ಅಭಿನಯಿಸಿದ ಮೇಲೆ ಇವರಿಬ್ಬರ ಬಗ್ಗೆ ಗುಸುಗುಸು ಸುದ್ದಿಗಳು ಕೇಳಿಬಂದಿದ್ದವು. ಆದರೆ ಈ ಬೆಡಗಿ ಮಾತ್ರ ಯಾವುದಕ್ಕೂ ಕ್ಯಾರೆ ಅನ್ನಲಿಲ್ಲ. 
 
ಆಗಾಗ ಬಿಕಿನಿಯಲ್ಲಿ ತಮ್ಮ ಸೌಂದರ್ಯವನ್ನ ತೆರೆದಿಡುವ ಪ್ರಯತ್ನ ಮಾಡುತ್ತಾ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ದಿಶಾ. ಇದೀಗ ಸಾಗರಕನ್ಯೆಯಾಗಿ ಇನ್ನೊಂದು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  "ಈ ಮೂಡ್‌ನಲ್ಲಿ ವಿಟಮಿನ್ ಸಿ (Sea) ಬೇಕು" ಅಂತೇಳಿ ಬಿಕಿನಿ ಫೋಟೋವೊಂದನ್ನ ತೇಲಿಬಿಟ್ಟಿದ್ದಾರೆ. ಕೇವಲ ಸೌಂದರ್ಯ ಅಷ್ಟೇ ಅಲ್ಲ, ಮಾತಿನಲ್ಲೂ ಒಂದಷ್ಟು ಚೂಟಿ ಈ ಬೆಡಗಿ ಅನ್ನೋದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ.  
 
ಬೀಚಲ್ಲಿ ಬಿಕಿನಿ ತೊಟ್ಟು ಈಜುತ್ತಿರುವ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಆದರೆ ಆ ಫೋಟೋದಲ್ಲಿ ಅವರ ಮುಖ ಮಾತ್ರ ಕಾಣಿಸುತ್ತಿಲ್ಲ. ಮುಖ ಕಾಣದಿದ್ದರೆ ಏನಂತೆ ಉಳಿದೆಲ್ಲಾ ಸೌಂದರ್ಯ ಅನಾವರಣ ಆಗಿದೆಯಲ್ಲಾ ಅಂತ ಅಭಿಮಾನಿಗಳು ಕಣ್‍ಕಣ್ ಬಿಡ್ತಿದ್ದಾರೆ. 
ನೀಲಿ ಬಣ್ಣದ ಟೂ ಪೀಸ್ ಬಿಕಿನಿಯಲ್ಲಿ ನೀರಿನಲ್ಲಿ ಮೀನಿನಂತೆ ಈಜುತ್ತಿರುವ ದಿಶಾ ತಮ್ಮ ದೇಹಸಿರಿಯನ್ನ ಅಭಿಮಾನಿಗಳಿಗೆ ತೆರೆದಿಟ್ಟಿದ್ದಾರೆ. ಅವರು ಹಾಲಿವುಡ್‌ಗೆ ಹೋಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ ಅಂತ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments