Select Your Language

Notifications

webdunia
webdunia
webdunia
webdunia

ಆಕ್ಷನ್ ಸಿನಿಮಾದ ಮೂಲಕ ಬರುತ್ತಿದ್ದಾರೆ ದಿಗಂತ್

ಆಕ್ಷನ್ ಸಿನಿಮಾದ ಮೂಲಕ ಬರುತ್ತಿದ್ದಾರೆ ದಿಗಂತ್
, ಸೋಮವಾರ, 30 ನವೆಂಬರ್ 2015 (12:32 IST)
ದಿಗಂತ್. ಚಂದನವನದ ದೂದ್ ಪೇಡಾ. ಇಷ್ಟು ದಿನ ಕ್ಯೂಟ್  ಲವರ್ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಇದೀಗ ತಮ್ಮ ಇಮೇಜ್ ನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ವೆಡ್ಡಿಂಗ್ ಪುಲಾವ್ ಸಿನಿಮಾದಲ್ಲಿ ಉತ್ತಮ ಪ್ರದರ್ಶನ ತೋರಿದ ದಿಗಂತ್ ಇದೀಗ ಕನ್ನಡದಲ್ಲಿ ಹೊಸ ಅವತಾರ ತಾಳಿದ್ದಾರೆ.
 

 
ದಿಗಂತ್ ಶಾರ್ಪ್ ಶೂಟರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಲವರ್ ಬಾಯ್ ಗೆಟಪ್ ನಿಂದ ಹೊರ ಬಂದು ಆಕ್ಷನ್ ಕಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ದಿಗಂತ್ ಅವರಿಗೆ ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ.ಅಲ್ಲದೇ ಸಿನಿಮಾದಲ್ಲಿ ದಿಗ್ಗಿ ಸಿಕ್ಸ್ ಪ್ಯಾಕ್ ಕೂಡ ಪ್ರದರ್ಶಿಸಲಿದ್ದಾರಂತೆ.
 
ಶಾರ್ಪ್ ಶೂಟರ್ ಸಿನಿಮಾವನ್ನು ಘೌಸ್ ಪೀರ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸಿನಿಮಾದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿವೆ. ಬಹು ದಿನಗಳ ನಂತರ ದಿಗಂತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋದರಿಂದ ಅಭಿಮಾನಿಗಳಿಗೂ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಗಳಿವೆ.

Share this Story:

Follow Webdunia kannada