Select Your Language

Notifications

webdunia
webdunia
webdunia
webdunia

ಕರಣ್ ಜೋಹರ್‌ನ್ನು ಭೇಟಿ ಮಾಡಿದ ಸಿದ್ದಾರ್ಥ ಮಲ್ಹೋತ್ರಾ...

ಕರಣ್ ಜೋಹರ್‌ನ್ನು ಭೇಟಿ ಮಾಡಿದ ಸಿದ್ದಾರ್ಥ ಮಲ್ಹೋತ್ರಾ...
ಮುಂಬೈ , ಬುಧವಾರ, 27 ಜುಲೈ 2016 (12:38 IST)
ಬಾಲಿವುಡ್ ನಟ ಸಿದ್ದಾರ್ಥ ಮಲ್ಹೋತ್ರಾ ನಿರ್ದೇಶಕ ಕರಣ್ ಜೋಹರ್‌ನ್ನು ಭೇಟಿ ಮಾಡಿದ್ದಾರಂತೆ. ಕೆಲ ದಿನಗಳ ಹಿಂದೆ ಕರಣ್ ಜೋಹರ್ ಅವರನ್ನು ಸಿದ್ದಾರ್ಥ ಮಲ್ಹೋತ್ರಾ ತಮ್ಮ ಮುಂದಿನ ಪ್ರೊಜೆಕ್ಟ್ ಗಾಗಿ ಭೇಟಿ ಯಾಗಿದ್ದರಂತೆ. ಕರಣ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಸಿದ್ದಾರ್ಥ ಮಲ್ಹೋತ್ರಾ ಕರಣ್ ಜತೆಗೆ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. 
ಮೂಲಗಳ ಪ್ರಕಾರ ಸಿದ್ದಾರ್ಥ ಮಲ್ಹೋತ್ರಾ ಮಧ್ಯರಾತ್ರಿ ತಮ್ಮ ಮೆಂಟರ್ ಅಂತಿರುವ ಕರಣ್‌ರನ್ನು ಭೇಟಿಯಾಗಿದ್ದಾರಂತೆ. ಮತ್ತೊಂದೆಡೆ ಫವಾದ್ ಖಾನ್ ಫೈನಲ್ ಆಗಿದ್ದಾರೆ. ಇದೀಗ ಸಿದ್ದಾರ್ಥ ಕೂಡ ಚಿತ್ರದ ಪ್ರೋಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕರಣ್ ಜೋಹರ್ ನಿರ್ಮಾಣದ ಬಾರ್ ಬಾರ್ ದೇಖೋ ಚಿತ್ರದಲ್ಲಿ ಸಿದ್ದಾರ್ಥ ಮಲ್ಹೋತ್ರಾ ಹಾಗೂ ಕತ್ರೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗ್ಲೇ ಚಿತ್ರದ ಹಾಡುಗಳು ಸಖತ್ ಹವಾ ಕ್ರಿಯೇಟ್ ಮಾಡುತ್ತಿವೆ. ಈ ಚಿತ್ರದಲ್ಲಿ ಸಿದ್ದಾರ್ಥ ಮಲ್ಹೋತ್ರಾ ಹಾಗೂ ಕತ್ರೀನಾ ಕಾಂಬಿನೇಷನ್ ವಿಭಿನ್ನವಾಗಿ ಮೂಡಿ ಬಂದಿದೆ.
 
'ಬಾರ್ ಬಾರ್ ದೇಖೋ' ಚಿತ್ರದ 'ಕಾಲಾ ಚಸ್ಮಾ' ಹಾಡಿನ ಮೊದಲ ಲುಕ್.. ಸಿದ್ದಾರ್ಥ ಕತ್ರೀನಾ ಅಭಿನಯದ 'ಬಾರ್ ಬಾರ್ ದೇಖೋ'  ಚಿತ್ರ ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗಲಿದೆ. ಬಾರ್ ಬಾರ್ ದೇಖೋ' ಚಿತ್ರವು ರೋಮ್ಯಾಂಟಿಗ್ ಡ್ರಾಮಾ ಒಳಗೊಂಡಿದ್ದು. ಚಿತ್ರ ನಿರ್ದೇಶನ ಮಾಡಿದ್ದಾರೆ ನಿತ್ಯಾ ಮೆಹರ್, ನಿರ್ಮಾಣ ರಿತೇಶ್ ಸಿದ್ಧವಾನಿ, ಸೆಪ್ಟೆಂಬರ್‌ 9ಕ್ಕೆ ಚಿತ್ರ ತೆರೆ ಕಾಣಲಿದೆ. 
 
ಚಿತ್ರದಲ್ಲಿ ಸಿದ್ಧಾರ್ಥ ಮಲೋತ್ರಾ- ಕತ್ರೀನಾ ಕೈಫ್ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ.ಇದೊಂದು ವಿಭಿನ್ನವಾದ ಲವ್ ಸ್ಟೋರಿ ಆಧಾರಿತ ಚಿತ್ರ. ಕತ್ರೀನಾ-ಸಿದ್ಧಾರ್ಥ  ಕೆಮೆಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ಕಂಡ 'ಕಬಾಲಿ' ಚಿತ್ರ