Select Your Language

Notifications

webdunia
webdunia
webdunia
webdunia

ದೀಪಿಕಾ ,ರಣ್ ವೀರ್, ರಣ್ಬೀರ್ ಕಪೂರ್ ಜೊತೆ ಸೇರಿ ಪಾರ್ಟಿ

ದೀಪಿಕಾ ,ರಣ್ ವೀರ್, ರಣ್ಬೀರ್ ಕಪೂರ್ ಜೊತೆ ಸೇರಿ ಪಾರ್ಟಿ
ಮುಂಬೈ , ಬುಧವಾರ, 27 ಜುಲೈ 2016 (08:53 IST)
ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿ ಹಾರಾಡಿದವರು ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ಕಪೂರ್ ಅವರು. ಇವರಿಬ್ಬರು ಇನ್ನೇನು ವಿವಾವವಾಗುತ್ತಾರೆ ಅನ್ನೋ ಮಟ್ಟಿಗೆ ಇಬ್ಬರು ಜೊತೆಯಾಗಿ ಸುತ್ತಾಡಿಕೊಂಡಿದ್ದರು.ಆದ್ರೆ ಅಗೇನಾಯ್ತೋ ಗೊತ್ತಿಲ್ಲ ಇಬ್ಬರೂ ದೂರವಾದ್ರು. ರಣ್ ಬೀರ್ ಕಪೂರ್ ಕ್ಯಾಟ್ ಹಿಂದೆ ಬಿದ್ರೆ ರಣ್ ವೀರ್ ಸಿಂಗ್ ಮನದನ್ನೆಯಾದ್ರು ದೀಪಿಕಾ.


ದೀಪಿಕಾ ಹಾಗೂ ರಣ್ ವೀರ್ ಸಿಂಗ್ ಈ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಜೊತೆಯಾಗಿ ಡ್ಯುಯೆಟ್ ಹಾಡುತ್ತಿದ್ರೆ ಇತ್ತ ರಣ್ ಬೀರ್ ಕಪೂರ್ ಅವರು ಕತ್ರೀನಾ ಕೈಫ್ ಅವರಿಂದ ದೂರವಾಗಿ ಏಕಾಂಗಿಯಾಗಿದ್ದಾರೆ.

ಆದ್ರೆ ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ಕಪೂರ್ ನಡುವೆ ಈಗಲೂ ಉತ್ತಮ ಸ್ನೇಹ ಸಂಬಂಧವಿದೆ. ಇದಕ್ಕೆ ಸಾಕ್ಷಿ ಮೊನ್ನೆ ರಣ್ ವೀರ್ ಸಿಂಗ್ , ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ಕಪೂರ್ ಅವರು ಜೊತೆಯಾಗಿ ಸೇರಿ ಪಾರ್ಟಿ ಮಾಡಿದ್ದು.ಬಾಂದ್ರಾ ರೆಸ್ಟೋರೆಂಟ್ ಒಂದರಲ್ಲಿ ಈ ಮೂವರು ಕಳೆದ ಶನಿವಾರ ಜೊತೆಯಾಗಿ ಪಾರ್ಟಿ ಮಾಡಿದ್ರಂತೆ.

ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಸೇರಿ ಪಾರ್ಟಿ ಮಾಡಿದ ಮೂವರು ಡ್ಯಾನ್ಸ್ ಕೂಡ ಮಾಡಿದ್ರಂತೆ. ಈ ವೇಳೆ ರಣ್ ಬೀರ್ ಹಾಗೂ ರಣ್ ವೀರ್ ಸಿಂಗ್ ಜೊತೆಯಾಗಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ರಂತೆ ಪಕ್ಕದಲ್ಲೇ ಕೂತು ದೀಪಿಕಾ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮೊಹೆಂಜದಾರೋ ಸಿನಿಮಾದ ನಾಯಕಿ ಪೂಜಾ ಹೆಗ್ಡೆಗೆ ಡೆಂಗ್ಯೂ