Select Your Language

Notifications

webdunia
webdunia
webdunia
webdunia

ಮುಂದಿನ ತಿಂಗಳು ಸೆಟ್ಟೇರಲಿದೆ ದೀಪಿಕಾ ಹಾಲಿವುಡ್ ಸಿನಿಮಾ

ಮುಂದಿನ ತಿಂಗಳು ಸೆಟ್ಟೇರಲಿದೆ ದೀಪಿಕಾ ಹಾಲಿವುಡ್ ಸಿನಿಮಾ
, ಶುಕ್ರವಾರ, 8 ಜನವರಿ 2016 (10:46 IST)
ಬಾಲಿವುಡ್ ಅಂಗಳದಲ್ಲಿರುವ ಯಶಸ್ಸಿ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಈ ಹಿಂದೆ ಎಲ್ಲೆಡೆ ಹರಿದಾಡಿತ್ತು.ಆದ್ರೆ ಆ ಬಳಿಕ ಸುದ್ದಿ ತಣ್ಣಗಾಗಿತ್ತು. ಆದ್ರೀಗ ದೀಪಿಕಾ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿರೋದು ಕನ್ಫರ್ಮ್ ಆಗಿದೆ.

 
ಮುಂದಿನ ತಿಂಗಳಿನಿಂದ ದೀಪಿಕಾ ತಮ್ಮ ಹಾಲಿವುಡ್ ಸಿನಿಮಾ xxx ಸಿರೀಸ್ ನ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆಯೇ ಸಿನಿಮಾದ ನಿರ್ದೇಶಕರಾದ ಡಿ ಜೆ ಕರ್ಸೋ ನಾವು ಜನವರಿಯಲ್ಲಿ ಶೂಟಿಂಗ್ ಆರಂಭಿಸುತ್ತೇವೆ. ದೀಪಿಕಾ ಅವರು ಫೆಬ್ರವರಿಯಲ್ಲಿ ನಮ್ಮ ತಂಡ ಸೇರಿಕೊಳ್ಳುತ್ತಾರೆ ಅಂತಾ ಹೇಳಿದ್ದರು. ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಿದದು ಮುಂದಿನ ತಿಂಗಳಿನಿಂದ ದೀಪಿಕಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದಿಂದಾಗಿ ದೀಪಿಕಾಗೆ ಮತ್ತಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಸಿಗೋ ಸಾಧ್ಯತೆಯಿದೆ.
 
ಇನ್ನು ಈ ಹಿಂದೆ ಪ್ರಿಯಾಂಕ ಛೋಪ್ರಾ ತಮ್ಮ ಕ್ವಾಂಟಿಕೋ ಶೋದ ಮಲಕ ಹಾಲಿವುಡ್ ನಲ್ಲೂ ಸದ್ದು ಮಾಡಿದ್ರು. ಇದೀಗ ದೀಪಿಕಾ ಸರದಿ. ಆದ್ರೆ ಇದು ದೀಪಿಕಾ  ಪಾಲಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. 

Share this Story:

Follow Webdunia kannada