Webdunia - Bharat's app for daily news and videos

Install App

ದಬ್ಬಾಂಗ್ -3 ಚಿತ್ರದಲ್ಲಿ ಮತ್ತೆ ಸಲ್ಮಾನ್ ಜೊತೆಗೆ ಸೋನಾಕ್ಷಿ ನಟಿಸುವುದು ಖಚಿತ

Webdunia
ಶನಿವಾರ, 30 ಜುಲೈ 2016 (10:20 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ -3 ಚಿತ್ರ ತೆರೆ ಮೇಲೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿ ಯಾರಾಗ್ತಾರೆ ಎಂಬುದರ ಬಗ್ಗೆ ಎಲ್ಲರ ಕುತೂಹಲವಾಗಿತ್ತು.. ಈ ಚಿತ್ರಕ್ಕಾಗಿ ಹಲವು ನಾಯಕಿಯರ ಹೆಸರು ಕೇಳಿ ಬಂದಿದ್ದವು. ಎಲ್ಲಾ ವದಂತಿಗಳಿಗೂ ಸ್ಪಷ್ಟನೆ ನೀಡಿದ್ದಾರೆ ಚಿತ್ರ ನಿರ್ಮಾಪಕ ಅರ್ಬಾಜ್ ಖಾನ್. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ   ನಟಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. 

 
ಇನ್ನೂ ಚಿತ್ರದಲ್ಲಿ ಪರಿಣಿತಿ ಚೋಪ್ರಾ ನಟಿಸಲಿದ್ದಾರೆ ಎಂದು ಹೇಳಲಾಗ್ತಿತ್ತು. ಆದ್ರೆ ಕಡೆಗೂ ದಬ್ಬಾಂಗ್ -3 ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವುದು ಖಚಿತವಾಗಿದೆ. ಅಲ್ಲದೇ ಈ ಚಿತ್ರದಲ್ಲಿ ಮತ್ತೊಬ್ಬ ಹಿರೋಯಿನ್ ಸಾಥ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಎಆರ್ ಮುರ್ಘದಾಸ್ ನಿರ್ದೇಶನದ 'ಅಕಿರಾ' ಚಿತ್ರದಲ್ಲಿ ದಬ್ಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಧ್ವನಿ ನೀಡಲಿದ್ದಾರೆ. ಪ್ರಿಯಾಂಕಾ ಛೋಪ್ರಾರನ್ನು ಫಾಲೋ ಮಾಡುತ್ತಿರುವ ಸೋನಾಕ್ಷಿ, ಅಲಿಯಾ ಭಟ್ ಹಾಗೂ ಶೃತಿ ಹಾಸನ್ ತಮ್ಮದೇ ಅಭಿನಯದ ಚಿತ್ರದಲ್ಲಿ ಧ್ವನಿ ನೀಡಿದ್ದರು. ಅವರಂತೆ ಇದೀಗ ಸೋನಾಕ್ಷಿ ಕೂಡ ಅಕಿರಾ ಚಿತ್ರದ ಟ್ರ್ಯಾಕ್ ಸಾಂಗ್‌ನಲ್ಲಿ ಕಂಠ ನೀಡಿದ್ದಾರೆ.

ಈ ಹಿಂದೆ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಅಭಿನಯಿಸಿದ್ದ ದಬ್ಬಾಂಗ್ ಚಿತ್ರ ಸೂಪರ್ ಹಿಟ್ ಮೂವೀಗಳಲ್ಲಿ ಒಂದಾಗಿತ್ತು.. ತೆರೆ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಇವರೆಡು ಜೋಡಿಗಳು, ಮತ್ತೆ ಸಿನಿ ರಸಿಕರನ್ನು ಮೋಡಿ ಮಾಡಲು ಬರುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments