Select Your Language

Notifications

webdunia
webdunia
webdunia
webdunia

ಡಿಸೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ: ಖಚಿತಪಡಿಸಿದ ಪತಿ ಸೈಫ್ ಅಲಿ ಖಾನ್

ಡಿಸೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ: ಖಚಿತಪಡಿಸಿದ ಪತಿ ಸೈಫ್ ಅಲಿ ಖಾನ್
ಮುಂಬೈ , ಶನಿವಾರ, 2 ಜುಲೈ 2016 (13:20 IST)
ಬಾಲಿವುಡ್‌ನಲ್ಲಿ ಬಹುದಿನಗಳಿಂದ ಕರೀನಾ ಕಪೂರ್ ತಾಯಿಯಾಗುತ್ತಿರುವ ಬಗ್ಗೆ ವದಂತಿಗಳು ಹರಡುತ್ತಲೇ ಇದ್ದವು. ಇದೀಗ   ಬೆಬೋ ತಾಯಿಯಾಗುತ್ತಿರುವ ಬಗ್ಗೆ ಪತಿ ಸೈಫ್ ಅಲಿ ಖಾನ್ ಅವರೇ ಖಚಿತಪಡಿಸಿದ್ದಾರೆ. ಇನ್ನೂ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಡಿಸೆಂಬರ್ ವರೆಗೂ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರಂತೆ. ಡಿಸೆಂಬರ್‌ನಲ್ಲಿ ಮಗುವಿಗೆ ಬೆಬೋ ಜನ್ಮ ನೀಡಲಿದ್ದಾಳೆ ಎಂದು ಮೂಲಗಳಿಂದ ತಿಳಿದು ಬಂದಿದೆ. 


ಆಪ್ತರ ಪ್ರೋತ್ಸಾಹಕ್ಕೆ ಥ್ಯಾಂಕ್ಸ್ ಹೇಳಬಯಸುವೆ ಎಂದು ನಟ ಸೈಫ್ ಅಲಿ ಖಾನ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಈ ಸುದ್ದಿ ತಿಳಿದ ಕರೀನಾ ಕಪೂರ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರಂತೆ.

ಮೊನ್ನೆ ಕರೀನಾ ಕಪೂರ್ ತಾವು ಪ್ರೆಗ್ನೆಂಟ್ ಎಂಬುದರ ಬಗ್ಗೆ  ಪ್ರತಿಕ್ರಿಯೆ ನೀಡಿದ್ದ ಅವರು 'ನಾನು ಒಬ್ಬ ಮಹಿಳೆ. ಆದ್ರೆ ಸದ್ಯಕ್ಕಂತೂ ಆ ವಿಚಾರದ ಬಗ್ಗೆ ನಾನು ಏನೇನು ಹೇಳಲು ಬಯಸುವುದಿಲ್ಲ' ಎಂದಿದ್ದಾರೆ. ಇನ್ನೂ ವಿಷೇಷ ಅಂದ್ರೆ 'ನೀವೆಲ್ಲ ಈ ಬಗ್ಗೆ ಮಾತನಾಡುತ್ತಿರುವುದರಿಂದ ನನಗೆ ತುಂಬಾ ಎಕ್ಯೈಟ್ ಆಗಿದ್ದು. ಲಂಡನ್‌ನಲ್ಲಿ ನಾನು ಐದು ಮಕ್ಕಳನ್ನು ಕೊಡಲಿದ್ದೇನೆ ' ಎಂದು ಕರೀನಾ ತಮಾಷೆಯಾಗಿ ಹೇಳಿಕೆ ನೀಡಿದ್ದರು. 
 
ಇತ್ತೀಚೆಗೆ ಲಂಡನ್‌ನಲ್ಲಿ ವೇಕೆಷನ್ ಮುಗಿಸಿದ್ದ ದಂಪತಿ ಕೆಲ ದಿನಗಳ ವರೆಗೆ ಲಂಡನ್‌ನಲ್ಲಿ ಕರೀನಾ ವಿಶ್ರಾಂತಿ ಪಡೆಯಲು ತೆರಳಿದ್ದರು.ಆ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕರೀನಾ ಮೂರು ತಿಂಗಳ ಪ್ರೆಗ್ನೆಂಟ್ ಎನ್ನುವ ಸುದ್ದಿ ಬಂದಿತ್ತು.ಅಲ್ಲದೇ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲನೆಯ ಬೇಬಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗ್ತಿತ್ತು.

ಇದೀಗ ಕರೀನಾ ಕಪೂರ್ ಪ್ರೆಗ್ನೆಂಟ್ ಎಂಬುದರ ಕುರಿತು ಹಲವು ಉಹಾಪೋಹಗಳು ಕೇಳಿ ಬಂದಿದ್ದವು. ಸದ್ಯಕ್ಕೆ ಕರೀನಾ ತಾಯಿಯಾಗುತ್ತಿರುವುದು ಖಚಿತಗೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವ್ಯವಸಾಯದಲ್ಲಿ ಬ್ಯೂಸಿ ಆದ ನಟಿ ಶಿಲ್ಪಾ ಶೆಟ್ಟಿ