Select Your Language

Notifications

webdunia
webdunia
webdunia
webdunia

ಮಹಿಳಾ ಪಾತ್ರದ ವಿಷಯದಲ್ಲಿ ಸಿನಿಮಂದಿಯ ಧೋರಣೆ ಬದಲಾಗ ಬೇಕು - ವಿದ್ಯಾ ಬಾಲನ್

ಮಹಿಳಾ ಪಾತ್ರದ ವಿಷಯದಲ್ಲಿ ಸಿನಿಮಂದಿಯ ಧೋರಣೆ ಬದಲಾಗ ಬೇಕು - ವಿದ್ಯಾ ಬಾಲನ್
, ಮಂಗಳವಾರ, 24 ಜೂನ್ 2014 (12:31 IST)
ಭಾರತೀಯ ಚಿತ್ರರಂಗದಲ್ಲಿ ಮಹಿಳ ಪ್ರಧಾನ ಚಿತ್ರಗಳ ಬಗ್ಗೆ ಹೆಚ್ಚು ಆಸ್ಥೆ ತೋರುತ್ತಿಲ್ಲ ಚಿತ್ರರಂಗದವರು. ಆದರು ಇವೆಲ್ಲದರ ನಡುವೆ ಆಗಾಗ ಒಂದಷ್ಟು  ಚಿತ್ರಗಳು ಬಂದಿವೆ. ಅಂತಹ ಕೆಲವು ಚಿತ್ರಗಳಲ್ಲಿ ವಿದ್ಯಾಬಾಲನ್ ನಟಿಸಿದ್ದಾರೆ. 

ಪರಿಣಿತಿ, ಪಾ, ದಿ ಡರ್ಟಿ ಪಿಕ್ಚರ್,ಕಹಾನಿ ಯಂತಹ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನೂ ಮಾಡಿ ವಿಮರ್ಶಕರ ಗಮನ ಸೆಳೆಯುವಲ್ಲಿ ಸಫಲವಾಗಿದ್ದಾರೆ. ಪ್ರಸ್ತುತ ವಿದ್ಯಾ ಬಾಬಿ ಜಾಸೂಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
 
 ಈ ಚಿತ್ರದಲ್ಲಿ ವಿದ್ಯಾಳನ್ನೇ ಆಯ್ಕೆ ಮಾಡಿಕೊಳ್ಳ ಬೇಕು ಎಂದು ನಿರ್ಧರಿಸಿದ ನಂತರ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಯಿತಂತೆ. ಇದಕ್ಕೆ ಕಾರಣ ವಿದ್ಯಾ ಈಗಾಗಲೇ ತನ್ನ ವಿಭಿನ್ನ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದುದಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರಿಗೆ ನೀಡುವ ಆದ್ಯತೆಯ ವಿಷಯಕ್ಕೆ ಸಂಬಂಧಿಸಿದಂತೆ ಇರುವಂತಹ ಧೋರಣೆ ಬದಲಾಗ ಬೇಕು. ಆದರೆ ಈ ಸಂಗತಿಯಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಮಹಿಳೆಯ ಪಾತ್ರವನ್ನು ಭಿನ್ನ ರೀತಿಯಲ್ಲಿ ತಿದ್ದ ಬೇಕು ಎನ್ನುವ ಆಶಯ, ಆಸಕ್ತಿ ಹೊಂದಿರುವ ಜನರ ಪ್ರಮಾಣ ತುಂಬಾ ಕಡಿಮೆ ಇದೆ. ಕೇವಲ ಶೇ. ೫ ರಷ್ಟು ಮಂದಿ ಮಾತ್ರ ಈ ರೀತಿ ಭಿನ್ನವಾಗಿ ಯೋಚಿಸುತ್ತಾರೆ. ಉಳಿದ ಶೇ. 95ರಷ್ಟು ಮಂದಿ ಮಹಿಳೆಯರಿಗೆ ಆದ್ಯತೆ ನೀಡದೆಯೆ ಸಂಪೂರ್ಣ ಮಾಡಿ ಬಿಡ್ತಾರೆ.

webdunia

 
ಬಾಬಿ ಜಾಸೂಸ್ ನಲ್ಲಿ ನನ್ನ ಪಾತ್ರವು ನೈಜತೆಗೆ  ಹತ್ತಿರ ವಾಗಿದೆ. ಇದರಲ್ಲಿ ನಾನು ಎಷ್ಟು ಗಂಭೀರವಾಗಿಯೂ ಹಾಗೂ ಅಷ್ಟೇ ಸ್ಟೈಲಿಶ್ ಆಗಿಯೂ ಸಹ ಇದ್ದೇನೆ. ಈ ಪಾತ್ರಕ್ಕಾಗಿ ನಾನು ಯಾವುದೇ ಬಗೆಯ ಶಿಕ್ಷಣವನ್ನು ಸಹ ತೆಗೆದು ಕೊಂಡಿಲ್ಲ.ಆದರು ಜನರಿಗೆ ಶರ್ಲಾಕ್ ಹೋಮ್ಸ್ ನೆನಪಿಗೆ ತರುವಂತಿದೆ.
 
ಪಾತ್ರದ ಸ್ವಭಾವಕ್ಕೆ ಅನುಗುಣವಾಗಿ ನಟಿಸಲು ಆದ್ಯತೆ ನೀಡಿದ್ದೇನೆ. ಆ ಪರಧಿ ಹೊರೆತು ಪಡಿಸಿ ಬೇರೆಲ್ಲೂ ನಾನು ಗಮನ ನೀಡಿಲ್ಲ. ನನ್ನ ಪಾತ್ರ ಖಂಡಿತವಾಗಿ ಎಲ್ಲರ ಗಮನ ಸೆಳೆಯುವಂತಿದೆ. ಆದರೆ ಯಾವುದೇ ಚಿತ್ರವಾಗಿರಲಿ ಮಹಿಳಾ ಪಾತ್ರ ಸಿದ್ಧ ಪಡಿಸುವ ಮುನ್ನ ನಿರ್ದೇಶಕರು ಹೆಚ್ಚಿನ ಗಮನ ನೀಡ ಬೇಕಾಗಿರುವುದು ಅತ್ಯಂತ ಮುಖ್ಯ ಸಂಗತಿ ಆಗಿದೆ ಎಂದು ಹೇಳಿದ್ದಾರೆ.  

Share this Story:

Follow Webdunia kannada