Select Your Language

Notifications

webdunia
webdunia
webdunia
webdunia

ಜಾಗ್ವಾರ್ ಚಿತ್ರದಲ್ಲಿ ನಟಿಸಲಿದ್ದಾರೆ ತೆಲಗು ಹಾಸ್ಯನಟ ಬ್ರಹ್ಮಾನಂದಮ್

ಜಾಗ್ವಾರ್ ಚಿತ್ರದಲ್ಲಿ ನಟಿಸಲಿದ್ದಾರೆ ತೆಲಗು ಹಾಸ್ಯನಟ ಬ್ರಹ್ಮಾನಂದಮ್
ಬೆಂಗಳೂರು , ಶನಿವಾರ, 23 ಜುಲೈ 2016 (15:20 IST)
ತೆಲಗು ಕಾಮಿಡಿ ನಟ ಬ್ರಹ್ಮಾನಂದಮ್ ಕನ್ನಡದ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜಾಗ್ವಾರ್ ಚಿತ್ರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್‌ಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಬ್ರಹ್ಮಾನಂದಮ್ ಪುನೀತ್ ರಾಜಕುಮಾರ್ ಅಭಿನಯದ ಚಿತ್ರದಲ್ಲಿ ನಟಿಸಿದ್ದರು.
ಜಾಗ್ವಾರ್ ಟೀಮ್ ಬುಲ್ಗೇರಿಯಾದಿಂದ ಇತ್ತೀಚಿಗಷ್ಟೇ ವಾಪಸ್ ಆಗಿದ್ದು, ಚಿತ್ರವು ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. 

 ಸಿನಿಮಾದಲ್ಲಿ ಬರುವ ಮುನ್ನ ನಿಖಿಲ್ ಗೆ ಆಕ್ಷನ್, ಡ್ರಾಮ, ಡ್ಯಾನ್ಸ್ ಎಲ್ಲವನ್ನು ಕಲಿಸಲಾಗಿದೆಯಂತೆ. ಅಷ್ಟೇ ಅಲ್ಲದೆ ಈಗ ನಿರ್ಮಿಸುವ ಚಿತ್ರ ಟಾಲಿವುಡ್ ಅಥ್ವಾ ಬಾಲಿವುಡ್ ರೀಮೇಕ್ ಆಗಿರುತ್ತದೆ ಎನ್ನುವ ಸಂಗತಿ ಕುಮಾರಸ್ವಾಮಿ ತಿಳಿಸಿದ್ದರು.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ ಕಪೂರ್