Select Your Language

Notifications

webdunia
webdunia
webdunia
webdunia

ಬಾಲಿವುಡ್ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಬಂಗಲೆ 90 ಕೋಟಿಗೆ ಸೇಲ್

ಬಾಲಿವುಡ್ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಬಂಗಲೆ 90 ಕೋಟಿಗೆ ಸೇಲ್
ಮುಂಬೈ , ಶುಕ್ರವಾರ, 25 ಜುಲೈ 2014 (10:17 IST)
ಬಾಲಿವುಡ್ ನಟ ರಾಜೇಶ್ ಖನ್ನಾ ಹಿಂದಿ ಚಿತ್ರರಂಗದ ಪ್ರಪ್ರಥಮ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. ಅವರ ಮನೋಜ್ಞ ಅಭಿನಯಕ್ಕೆ ಲಕ್ಷಾಂತರ ಅಭಿಮಾನಿಗಳು ಮನಸೋತಿದ್ದರು. ಅವರು  ವಾಸವಾಗಿದ್ದ  ಆಶೀರ್ವಾದ್ ಬಂಗಲೆಯನ್ನು ಮ್ಯೂಸಿಯಂ ಮಾಡಬೇಕೆಂದು  ಖನ್ನಾ ಬಯಸಿದ್ದರು.

ಆದರೆ ಖನ್ನಾ ಅವರ ಕೊನೆಗಾಲದ ಬಯಕೆ ಕನಸಾಗಿಯೇ ಉಳಿದಿದ್ದು, ಅವರ ಬಂಗಲೆ  90 ಕೋಟಿ ರೂ.ಗೆ ಸೇಲ್ ಆಗಿದೆ. ತನ್ನ ಪುತ್ರಿಯರು ಲೈಫಲ್ಲಿ ಸೆಟ್ಲ್ ಆಗಿರುವುದರಿಂದ  ತಮ್ಮ ಬಂಗಲೆಯನ್ನು ಮ್ಯೂಸಿಯಂ ಮಾಡಲು ಖನ್ನಾ  ಬಯಸಿದ್ದರು.ಆದರೆ ಮುಂಬೈನ ಕಾರ್ಟರ್ ರೋಡ್‌ನಲ್ಲಿರುವ ಬಂಗಲೆಯನ್ನು ಶಶಿಕಿರಣ್ ಶೆಟ್ಟಿ ಎಂಬ ಉದ್ಯಮಿ ಖರೀದಿಸಿದ್ದು,  ರಾಜೇಶ್ ಖನ್ನಾ ಅವರ ಕನಸು ಕನಸಾಗಿಯೇ ಉಳಿದಿದೆ.

 ರಾಜೇಶ್ ಖನ್ನಾ ಕೊನೆಯ ದಿನಗಳಲ್ಲಿ ಅವರ ಜೊತೆ ಇದ್ದ  ಅವರ ಪ್ರೇಯಸಿ ಅನಿತಾ ಅದ್ವಾನಿ ಅವರು ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದಾರೆ. ಕಡಲತಡಿಯಲ್ಲಿದ್ದ ಈ ಬಂಗಲೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿತ್ತು. ಖನ್ನಾ ಬಂಗಲೆಯ ಏಕಮಾತ್ರ ಫಲಾನುಭವಿಗಳು ಟ್ವಿಂಕಲ್ ಮತ್ತು ರಿಂಕಿ. 

ದೇವರ ಆಶೀರ್ವಾದದಿಂದ ನನ್ನ ಪುತ್ರಿಯರಾದ ಟ್ವಿಂಕಲ್ ಮತ್ತು ರಿಂಕಿ ಮದುವೆಯಾಗಿದ್ದು ಜೀವನದಲ್ಲಿ ಸೆಟ್ಲ್ ಆಗಿದ್ದಾರೆ. ಅವರಿಗೆ ನನ್ನ ಆಸ್ತಿ ಬೇಕಿಲ್ಲ. ಆದರೆ ನನ್ನ ಪುತ್ರಿಯರಿಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿಯಾಗಿರುವುದರಿಂದ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದರು.ರಾಜೇಶ್ ಖನ್ನಾ ಈ ಬಂಗಲೆಯನ್ನು ಇನ್ನೊಬ್ಬ ಬಾಲಿವುಡ್ ದಂತಕತೆ ರಾಜೇಂದ್ರ ಕುಮಾರ್ ಎಂಬವರಿಂದ ಖರೀದಿಸಿದ್ದರು.

ನಟನ ಪ್ರೇಯಸಿಯಾಗಿದ್ದ ಅನಿತಾ ಅಡ್ವಾಣಿ ರಾಜೇಶ್ ಖನ್ನಾ ಮರಣದ ನಂತರ ಅವರ ಕುಟುಂಬದ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದರು. "ನನಗೆ ಆಶೀರ್ವಾದದ ಮೇಲೆ ಆಸಕ್ತಿ ಇಲ್ಲ. ನಾನು ರಾಜೇಶ್ ಖನ್ನಾ ಇಚ್ಛೆಯಂತೆ ಮ್ಯೂಸಿಯಂ ಆಗಿ ಪರಿವರ್ತಿಸಲು ಬಯಸಿದ್ದೇನೆ. ರಾಜೇಶ್ ಖನ್ನಾಗೆ ಕುಟುಂಬದ ಅಗತ್ಯವಿದ್ದಾಗ ಅವರು ಎಲ್ಲಿದ್ದರು ಎಂದು ಕೇಳಲು ನಾನು ಬಯಸುತ್ತೇನೆ. ನಾನು ಇಷ್ಟುವರ್ಷಗಳವರೆಗೆ ಅವರನ್ನು ನೋಡಿಕೊಂಡು, ಅವರ ಅಗತ್ಯಗಳನ್ನೆಲ್ಲಾ ಪೂರೈಸಿದೆ. ನಾನು ಪರಿಹಾರ ಕೇಳಿರುವುದು ಏಕೆಂದರೆ ಅವರು ನನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ" ಎಂದು ಹೇಳಿದ್ದಾರೆ. ಆದರೆ ರಾಜೇಶ್ ಖನ್ನಾ ಕುಟುಂಬ ಮಾತ್ರ ಇವೆಲ್ಲವನ್ನೂ ನಿರಾಕರಿಸಿದೆ.  

Share this Story:

Follow Webdunia kannada