ಪ್ರಿಯಾಂಕ ಚೋಪ್ರ ವಿಶ್ವ ಸುಂದರಿ, ಮಾಡೆಲ್ ಮತ್ತು ನಟಿಯಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಒಬ್ಬ ಹಾಡುಗಾರ್ತಿಯಾಗಿಯು ಸಹಿತ ಎಲ್ಲರ ಗಮನ ಸೆಳೆದಿದ್ದಾಳೆ. ಈ ಹಿಂದಿ ನಟಿ ಬಾಲಿವುಡ್ ಚಿತ್ರದಲ್ಲಿ ಹಾಡಿರ ಬಹುದೇನೋ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪುಗ್ರಹಿಕೆ, ಪಿಗ್ಗಿ ಇಂಗ್ಲೀಷ್ ಭಾಷೆಯಲ್ಲಿ ಹಾದಿ ತನ್ನ ಪ್ರತಿಭೆ ತೋರಿದ್ದಾಳೆ.
ಈಕೆ ಹಾಡಿನ ರೀತಿಗೆ ಇಡಿ ಪಾಪ್ ಪ್ರಿಯರು ದಂಗಾಗಿ ಹೋಗಿದ್ದಾರಂತೆ. ಈ ಆನ್ ಸ್ಕ್ರೀನ್ ಬ್ಯೂಟಿ ಪಿಗ್ಗಿ ಚಾಪ್ಸ್ ಬಿ ಟೌನ್ ಬೆಬ್ಸ್ ಗಳಿಗೆ ತಾನು ನಿಮ್ಮೆಲ್ಲರಿಗಿಂತ ಭಿನ್ನ ಎಂಬುದಾಗಿ ತೋರಿದ್ದಾಳೆ. ಆಕೆ ಹಾಡುವುದನ್ನು ಸಹ ಪ್ರೊಫೆಶನಲ್ ಆಗಿ ತೆಗೆದುಕೊಂಡಿದ್ದಾಳೆ.
ಐ ಕಾಂಟ್ ಮೆಕ್ ಯು ಲವ್ ಮಿ ಅನ್ನುವ ಜಿಂಗಲ್ ಆಕೆ ಬಿಡುಗಡೆ ಮಾಡಿದ್ದಾಳೆ. ಇನ್ನು ವೀಡಿಯೋ ಬಿಡುಗಡೆ ಆಗಿರದ ಈ ಹಾಡು ಅಮೇರಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ. ತನ್ನ ಮಾದಕ ರೂಪದ ಮುಖಾಂತರ ಮನ ಸೆಳೆದಿದ್ದ ಪ್ರಿಯಾಂಕ ಈಗ ತನ್ನ ಮಾದಕ ಕಂಠ ದಿಂದಲೂ ಸಹ ವಿಶ್ವದ ಗಮನ ಸೆಳೆದಿದ್ದಾಳೆ.. ಈ ಆಲ್ಬಮ್ ನಲ್ಲಿ ಆಕೆಯೊಂದಿಗೆ ಪ್ರಸಿದ್ಧ ಹಾಡುಗಾರ ಪಿಟ್ ಬಲ ಸಹ ಇದ್ದಾರೆ . ವಾರ್ರೆವ್ವಾ ಪ್ರಿಯಾಂಕ !