Select Your Language

Notifications

webdunia
webdunia
webdunia
webdunia

'ಅಲೋನ್' ಚಿತ್ರದ ಬಳಿಕ.. ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬಿಪಾಶಾ ಬಸು, ಕರಣ್ ಸಿಂಗ್?

'ಅಲೋನ್' ಚಿತ್ರದ ಬಳಿಕ.. ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬಿಪಾಶಾ ಬಸು, ಕರಣ್ ಸಿಂಗ್?
ಮುಂಬೈ , ಶುಕ್ರವಾರ, 26 ಆಗಸ್ಟ್ 2016 (11:11 IST)
'ಅಲೋನ್' ಚಿತ್ರದಲ್ಲಿ ಹಾಟ್ ಆಗಿ ನಟಿಸಿದ್ದ ಜೋಡಿಗಳು ಇದೀಗ ಮತ್ತೆ ತೆರೆ ಮೇಲೆ ಅಭಿಮಾನಿಗಳನ್ನು ಮೋಡಿ ಮಾಡಲು ಬರುತ್ತಿದ್ದಾರಂತೆ. ನಿಜ ಜೀವನದಲ್ಲೂ ಈ ಎರಡು ಜೋಡಿಗಳು ದಂಪತಿಗಳಾಗಿದ್ದಾರೆ. ಅಲೋನ್ ಚಿತ್ರದಲ್ಲಿ ಬಿಪಾಶಾ ಬಸು, ಪತಿ ಕರಣ್ ಸಿಂಗ್ ಗ್ರೋವರ್ ಕೆಮೆಸ್ಟ್ರಿ ಸಖತ್ ಆಗಿ ಮೂಡಿ ಬಂದಿತ್ತು. ಇದೀಗ ಮತ್ತೆ ಇಬ್ಬರು ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮೂಲಗಳ ಪ್ರಕಾರ, ಮಿಲ್ಲಾಪ್ ಝವೇರಿ  ನಿರ್ದೇಶಕ ಬಿಪಾಶಾಗೆ ಆಫರ್ ಮಾಡಿದ್ದಾರಂತೆ, ಇನ್ನೂ ಗಂಡನ ಜತೆ ತೆರೆ ಹಂಚಿಕೊಳ್ಳುವುದು ಬಿಪಾಶಾಗೆ ತುಂಬಾ ಇಷ್ಟ.. ಆದ್ದರಿಂದ ಈ ಚಿತ್ರದಲ್ಲಿ ತನ್ನ ಪತಿ ಕರಣ್ ಸಿಂಗ್ ಗ್ರೋವರ್‌ನ್ನೇ ತೆಗೆದುಕೊಳ್ಳುವಂತೆ ಶಿಫಾರಸ್ಸು ಕೂಡ ಮಾಡಿದ್ದಾರಂತೆ,

ಇನ್ನೂ ಕರಣ್ ಸಿಂಗ್ ಗ್ರೋವರ್ ಹಾಗೂ ಬಿಪಾಶಾ ಬಸುಗೆ ಸ್ಕ್ರೀಪ್ಟ್ ಕೂಡ ಇಷ್ಟವಾಗಿದೆಯಂತೆ. ಮತ್ತೆ ಎರಡು ಜೋಡಿಗಳು ಬಿಗ್ ಸ್ಕ್ರೀನ್ ಮೇಲೆ ಬಂದ್ರೆ ಅಭಿಮಾನಿಗಳು ರಸದೌತಣ ಸಿಕ್ಕಂತೆ.
 
2015ರಲ್ಲಿ ಬಿಪಾಶಾ ಬಸು ಅಲೋನ್, ಮೂಲಗಳ ಪ್ರಕಾರ ಇದುವರೆಗೂ ಯಾವುದೇ ಖಚಿತಪಿಸಿರಲಿಲ್ಲ. ಇದೇ ವರ್ಷದಂದು ಇಬ್ಬರು ಸಪ್ತಪತಿ ತುಳಿದಿದ್ದರು.ಇನ್ನೂ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್‌ಗೆ ಕೈಯಲ್ಲಿ ಸಿನಿಮಾಗಳಿಲ್ಲ. ಮತ್ತೆ ಬಿಗ್ ಸ್ಕ್ರೀನ್ ಮೇಲೆ ಇಬ್ಬರು ನಟಿಸುವುದು ನಿಜವಾದರೆ ಅಭಿಮಾನಿಗಳಿಗೆ ಆಗುವ ಖುಷಿ ಮತ್ತೊಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಏಕೆ ಮದುವೆಯಾಗಲಿಲ್ಲ.. ಸುಷ್ಮಿತಾ ಬಹಿರಂಗ