Select Your Language

Notifications

webdunia
webdunia
webdunia
webdunia

ಕನ್ನಡದ ಬಿಗ್ ಬಾಸ್ 4 ಪ್ರೋಮೋ ಬಿಡುಗಡೆ

ಕನ್ನಡದ ಬಿಗ್ ಬಾಸ್ 4 ಪ್ರೋಮೋ ಬಿಡುಗಡೆ
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2016 (09:58 IST)
ಕನ್ನಡದಲ್ಲಿ ಬರುಲಿರುವ 'ಬಿಗ್ ಬಾಸ್ 4 'ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋ ದಲ್ಲಿ ನಟ ಸುದೀಪ್ ಡಿಫರಂಟ್ ಸ್ಟೈಲ್, ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಗ್ ಬಾಸ್ 4ರ ಎಲ್ಲಾ ಕೆಲಸಗಳು ಮುಗಿದಿದ್ದು, ಅಕ್ಟೋಬರ್‌ನಲ್ಲಿ ಬಿಗ್ ಬಾಸ್ 4 ಶೋ ಆರಂಭವಾಗಲಿದೆ.

ಕಿರುತೆರೆಯಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿರುವ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್. ಇದುವೆರೆಗೂ ಮೂವರ ಆವೃತ್ತಿ ನಡೆದಿದ್ದು ಮೂಲರು ಆವೃತ್ತಿಗಳಿಗೂ ಕನ್ನಡಗರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ನಾಲ್ಕನೇ ಆವೃತ್ತಿಗೂ ಸದ್ದಿಲ್ಲದೇ ತಯಾರಿ ಶುರುವಾಗಿದ್ದು, ಅಕ್ಟೋಬರ್ ನಲ್ಲಿ ಕಾರ್ಯಕ್ರಮ ಶುರುವಾಗಲಿದೆ.
 
ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಲಿದೆ. ಇನ್ನು ಕಾರ್ಯಕ್ರಮದ ನಿರ್ವಹಣೆಯ ಜವಬ್ದಾರಿಯನ್ನು ನಟ ಕಿಚ್ಚ ಸುದೀಪ್ ಅವರೇ ನಿರ್ವಹಿಸಲಿದ್ದಾರೆ. ಇದೀಗ ಶೋದ ಪ್ರೋಮೋ ಬಿಡುಗಡೆಯಾಗಿದೆ.
 
ಇನ್ನು ಕಾರ್ಯಕ್ರಮದ ನಿರೂಪಣೆಗೆ ಕಿಚ್ಚ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.ಅಲ್ಲದೇ ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಾರೆ ಅನ್ನೋ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿಲ್ಲ. ಈ ಬಗ್ಗೆ ವಿಚಾರ ನಡೆಯಲಾಗುತ್ತಿದೆ.  

\

ಬಿyfಬಿ




 

Share this Story:

Follow Webdunia kannada

ಮುಂದಿನ ಸುದ್ದಿ

ರಾಧಿಕಾ ಕುಮಾರಸ್ವಾಮಿ ಕೈಗೆ ಸೀಗುತ್ತಿಲ್ವಂತೆ.. ಸ್ವೀಟಿ ಎಲ್ಲಿದ್ದಾರೆ?