Select Your Language

Notifications

webdunia
webdunia
webdunia
webdunia

ಅಕ್ಟೋಬರ್ ತಿಂಗಳಲ್ಲಿ ಹರ್ಭಜನ್ ಸಿಂಗ್ ವಿವಾಹ

ಅಕ್ಟೋಬರ್ ತಿಂಗಳಲ್ಲಿ ಹರ್ಭಜನ್ ಸಿಂಗ್ ವಿವಾಹ
, ಸೋಮವಾರ, 24 ಆಗಸ್ಟ್ 2015 (10:29 IST)
ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ನಡುವಿನ ಪ್ರೇಮ ಕಹಾನಿ ಇಂದು ನಿನ್ನೆಯದಲ್ಲ. ಇವರಿಬ್ಬರು ಶೀಘ್ರದಲ್ಲೇ ವಿವಾಹವಾಗುತ್ತಾರೆ ಅನ್ನೋ ಸುದ್ದಿ ವರ್ಷದಿಂದ ತೇಳಿ ಬರುತ್ತಲೇ ಇತ್ತು. ಆದ್ರೆ ವಿವಾಹದ ಬಗ್ಗೆ ಅವರಿಬ್ಬರು ಮಾತ್ರ ಹೆಚ್ಚೇನು ಹೇಳಿಕೊಂಡಿರಲಿಲ್ಲ. ಆದ್ರೀಗ ಇವರ ವಿವಾಹದ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.

ಎರಡು ಕುಟುಂಬ ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಭಜ್ಜಿ ಹಾಗೂ ಗೀತಾ ವಿವಾಹ ನಡೆಯಲಿದೆ. ಅಕ್ಟೋಬರ್ 29 ರಂದು ಇವರ ವಿವಾಹ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆಯಂತೆ. ಜಲಂಧರ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಫಗ್ವಾರದ ಹೋಟೆಲ್ ಒಂದರಲ್ಲಿ ವಿವಾಹ ನೆರವೇರಲಿದೆ.
     
ಇನ್ನು ಸದ್ಯ ಹರ್ಭಜನ್ ಶ್ರೀಲಂಕಾದಲ್ಲಿರೋದರಿಂದ ಅವರು ಬಂದ ಮೇಲೆ ಆಮಂತ್ರಣ ಪತ್ರಿಕೆ ಇನ್ನಿತರ ಮುಖ್ಯ ಕೆಲಸಗಳು ನಡೆಯಲಿವೆಯಂತೆ. ಇನ್ನು ವಿವಾಹದಲ್ಲಿ ಅನೇಕ ಸಿನಿಮಾ ತಾರೆಯರು, ಕ್ರಿಕೆಟಿಗರು ಭಾಗಿಯಾಗೋ ನಿರೀಕ್ಷೆಯಿದೆ.

Share this Story:

Follow Webdunia kannada