Select Your Language

Notifications

webdunia
webdunia
webdunia
webdunia

ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಗ್ಲಾಮರಸ್ ಪ್ರಿಯಾಂಕಾ ಛೋಪ್ರಾ...

ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಗ್ಲಾಮರಸ್ ಪ್ರಿಯಾಂಕಾ ಛೋಪ್ರಾ...
ಮುಂಬೈ , ಗುರುವಾರ, 30 ಜೂನ್ 2016 (14:24 IST)
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ತಾರುಣ್ಯಭರಿತ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಟೌನ್ ದಿವಾ ಪ್ರಿಯಾಂಕಾ ಬ್ಲಿಚ್ ಮಾಡಿಕೊಂಡಿರುವ ಫೇಸ್‌ನಲ್ಲಿ ಮುಖಪುಟಕ್ಕೆ ಪೋಸ್ ನೀಡಿದ್ದಾರೆ. ಪ್ರಿಗ್ಗಿಯ ಹಾಟ್‌ನೆಸ್ ಎಂಥವರನ್ನು ಮೋಡಿ ಮಾಡುವಂತಿದೆ. 
ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಪ್ರಿಯಾಂಕಾಳ ಅವತಾರ ನೋಡಿದ್ರೆ ನಿಮಗೂ ಶಾಕ್ ಆಗಬಹುದು. ಪಿಗ್ಗಿ ಗ್ಲಾಮರಸ್ ಆಗಿ ಹಾಗೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಕವರ್ ಪೇಜ್ ನೋಡಿದ್ರೆ ನೀವೂ ದಂಗಾವುದು ಖಂಡಿತ..
 
ಇನ್‌ಸ್ಟೈಲ್ ಮ್ಯಾಗಜೀನ್‌ಲ್ಲಿ ಪ್ರಿಯಾಂಕಾ ಸಖತ್ ಆಗಿ ಮಿಂಚಿದ್ದಾಳೆ.  ಈ ಫೊಟೋವನ್ನು ಟ್ವಿಟರ್ ಕವರ್ ಪೇಜ್‌ನ್ನು ಅಭಿಮಾನಿಗಳ ಪೇಜ್‌ಗೆ ಪಿಗ್ಗಿ ಶೇರ್ ಮಾಡಿದ್ದಾರೆ. 
 
ಮೊನ್ನೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅನುರಾಗ್ ಕಶ್ಯಪ್ ಅವರ ಉಡ್ತಾ ಪಂಜಾಬ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಕ್ರಿಯೆಟಿವಿಟಿ ಎಂದಿಗೂ ನಿಲ್ಲವುದಿಲ್ಲ ಎಂದು ತಿಳಿಸಿದ್ದರು. 'ನಮ್ಮ ಪೂರ್ವಜರ ಸುದೀರ್ಘ ಹೋರಾಟದ ಬಳಿಕ ನಮಗೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಲಭಿಸಿದೆ'. 'ಕ್ರಿಯೆಟಿವಿಟಿಯನ್ನು ಪ್ರಜಾಪ್ರಭುತ್ವದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. 'ಜೈ ಗಂಗಾಜಲ' ಚಿತ್ರಕ್ಕೂ ಆಕ್ಷೇಪಣೆ ಕೇಳಿ ಬಂದಿದ್ದವು ಎಂದು ಪ್ರಿಯಾಂಕಾ ಹೇಳಿದ್ದರು. 
 
ಇತ್ತೀಚೆಗೆ ಪ್ರಿಯಾಂಕಾ ಛೋಪ್ರಾಗೆ ಪದ್ಮಶ್ರೀ ಪ್ರಶಸ್ತಿ ದೊರಕಿತ್ತು. 'ಉಡ್ತಾ ಪಂಜಾಬ್' ಟೈಟಲ್ ತೆಗೆದುಹಾಕುವ ಕುರಿತು ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ. 'ಚಿತ್ರದ ಟೈಟಲ್ ಹಿಂದೆ ನಿರ್ಮಾಪಕರ ಹಾಗೂ ನಿರ್ದೇಶಕರ ಕ್ರಿಯೆಟಿವಿಟಿ ಅಡಗಿರುತ್ತದೆ 'ಹಾಗಾಗಿ ಅದನ್ನು ತೆಗೆದುಹಾಕಲು ಹೇಗೆ ಸಾಧ್ಯ? ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಲಾಮರ್ ಜಗತ್ತಿನಲ್ಲಿ ಸೋನಮ್,ರಿಯಾ ಕಪೂರ್ ಸ್ಟೈಲ್ ಐಕಾನ್‌ಗಳು: ಕಂಗನಾ