Webdunia - Bharat's app for daily news and videos

Install App

ಹಾಲಿವುಡ್‌ಗೆ ರಿಮೇಕ್ ಆಗುತ್ತಿದೆ ಬಾಹುಬಲಿ!

Webdunia
ಸೋಮವಾರ, 13 ಜುಲೈ 2015 (15:48 IST)
ವಿಶ್ವದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಹಾಲಿವುಡ್‍ನಲ್ಲೂ ರಿಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ. 
 
ಹಾಲಿವುಡ್‍ನ ಪ್ರಸಿದ್ಧ ಸಿನಿಮಾ ನಿರ್ಮಾಣ ಕಂಪನಿಯೊಂದು ಬಾಹುಬಲಿಯ ರಿಮೇಕ್ ಹಕ್ಕನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದೆ ಎಂಬ ಮಾಹಿತಿ ಹರಿದು ಬಂದಿದೆ. ಅಮೆರಿಕದ ಕಂಪೆನಿಯ ಈ ಪ್ರಸ್ತಾವ ನಿರ್ದೆಶಕ ರಾಜಮೌಳಿ ಅವರನ್ನು ಒಂದು ಕ್ಷಣ ದಂಗು ಬಡಿಸಿಬಿಟ್ಟಿತಂತೆ. ಆದರೆ ಈ ಕುರಿತು ಅವರಿನ್ನೂ ಒಪ್ಪಿಗೆ ನೀಡಿಲ್ಲ. ಚಿತ್ರ ತಂಡದ ಜತೆ ಚರ್ಚಿಸಿ ಈ ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. 
 
ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಅಬ್ಬರಿಸುತ್ತಿದ್ದು, ಅಮೇರಿಕದಲ್ಲಿ ಅಮಿರ್ ಖಾನ್ ಅವರ ಅಭಿನಯದ ಸಿನಿಮಾ ಪೀಕೆ ದಾಖಲೆಯನ್ನು ಅಳಿಸಿ ಮುಂದೆ ಹೋಗುತ್ತಿದೆ. ಅಮೇರಿಕದಲ್ಲಿ ಪೀಕೆ ಮೊದಲ ದಿನದ ಗಳಿಸಿದ್ದು 6 ಕೋಟಿಯಾದರೆ,  ಬಾಹುಬಲಿ ಒಂದೇ ದಿನಕ್ಕೆ 8.15 ಕೋಟಿಯನ್ನು ತನ್ನದಾಗಿಸಿ ಕೊಂಡಿದೆ. 
 
ಭಾರತದಲ್ಲಿ ಎರಡು ದಿನಕ್ಕೆ ಬಾಹುಬಲಿ ಗಳಿಕೆ 140 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

Show comments