Select Your Language

Notifications

webdunia
webdunia
webdunia
webdunia

ಆಟೋಬಯಾಗ್ರಫಿ ಬರೆಯಲ್ಲ..ನನ್ನ ಹಳೆಯ ಅದೆಷ್ಟೋ ನೋವುಗಳು ನೆನಪಾಗುತ್ತವೆ - ಸಲ್ಮಾನ್

ಆಟೋಬಯಾಗ್ರಫಿ ಬರೆಯಲ್ಲ..ನನ್ನ ಹಳೆಯ ಅದೆಷ್ಟೋ ನೋವುಗಳು ನೆನಪಾಗುತ್ತವೆ - ಸಲ್ಮಾನ್
ಮುಂಬೈ , ಶುಕ್ರವಾರ, 22 ಜುಲೈ 2016 (10:44 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಮೊನ್ನೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರ ಆಟೋಬಯಾಗ್ರಫಿಯನ್ನು ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಇದೀಗ ತಮ್ಮ ಆಟೋಬಯೋಗ್ರಫಿ ಬಗ್ಗೆ ಮಾತನಾಡಿರುವ ಸಲ್ಮಾನ್. ನನ್ನ ಆಟೋಬಯಾಗ್ರಫಿ ಬರೆಯಬೇಕು ಎನ್ನುವ ಆಸಕ್ತಿ ನನಗಿಲ್ಲ ಎಂದು ಸಲ್ಮಾನ್ ತಿಳಿಸಿದ್ದಾರೆ. 

 
ಬಾಲಿವುಡ್ ತಾರೆಯರು ತಮ್ಮ ಜೀವನಕಥೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದರು. ಅನೇಕ ನಟರ ಜೀವನಕಥೆಗಳು ಸಿನಿಮಾಗಳಾಗಿವೆ.ಆದ್ರೆ ಸಲ್ಮಾನ ಖಾನ್ ಅವರಿಗೆ ಮಾತ್ರ ತಮ್ಮ ಅಟೋಬಯೋಗ್ರಫಿ ಬರೆಯಬೇಕು ಎಂಬ ಬಗ್ಗೆ ಆಸಕ್ತಿ ಇಲ್ಲ, ನಾನು ನನ್ನ ಜೀವನಕಥೆಯನ್ನು ಪುಸ್ತಕ ರೂಪದಲ್ಲಿ ತರೋದಕ್ಕೆ ಸಾಧ್ಯವಿಲ್ಲ.

ಯಾಕಂದ್ರೆ ನಾನು ನನ್ನ ಜೀವನವನ್ನು ಪುಸ್ತಕ ರೂಪದಲ್ಲಿ ತರೋದಕ್ಕೆ ಮುಂದಾದ್ರೆ ಆಗ ನನ್ನ ಹಳೆಯ ಅದೆಷ್ಟೋ ನೋವುಗಳು ನೆನಪಾಗುತ್ತವೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಪುಸ್ತಕ ಬರೆಯೋ ಬಗ್ಗೆ ಯೋಚಿಸಿಲ್ಲ ಅಂತಾ ಅವರು ಹೇಳಿದ್ದಾರೆ,
 
ಮೊನ್ನೆ ಸಾನಿಯಾ ಮಿರ್ಜಾ 'ಎಸ್ ಅಗೈನಿಸ್ಟ್ ಓಡ್ಸ್' ಪುಸ್ತಕವನ್ನು ಬಿಡುಗಡೆಗೊಳಿಸಿದ ವೇಳೆ ಸಲ್ಮಾನ್ ಖಾನ್ ಈ ಮಾತನ್ನು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಡೆಲ್ ಆದ ಸೆಲೆಬ್ರಿಟಿಯೊಬ್ಬರ ನಾಲ್ಕು ವರ್ಷದ ಮಗು..!